Select Your Language

Notifications

webdunia
webdunia
webdunia
webdunia

ಬೆಂಗಳೂರು ಮೂಲದ ಸಂಗೀತಗಾರ ಮುಂಬೈನಲ್ಲಿ ಆತ್ಮಹತ್ಯೆ

ಸಂಗೀತಗಾರ ಆತ್ಮಹತ್ಯೆ
12 ಅಂತಸ್ತಿನ ಕಟ್ಟಡದಿಂದ ಹಾರಿ ಮ್ಯೂಸಿಶಿಯನ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮೃತ ಸಂಗೀತಗಾರನನ್ನ ಬೆಂಗಳೂರು ಮೂಲದ 29 ವರ್ಷದ ಕರಣ್ ಜೋಸೆಫ್ ಎಂದು ಗುರ್ತಿಸಲಾಗಿದೆ. ಸ್ನೇಹಿತ ರಿಶಿ ಶಾಗೆ ಕಂಪನಿಯಿಂದ ನೀಡಿದ್ದ 12ನೇ ಮಹಡಿಯ ಫ್ಲ್ಯಾಟ್`ನ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
 

ಕಳೆದೊಂದು ತಿಂಗಳಿಂದ ಸ್ನೇಹಿತನ ಜೊತೆ ವಾಸವಿದ್ದ ಕರಣ್ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು. ಬೆಳಗ್ಗೆ 8.30ರ ಸುಮಾರಿಗೆ ಸ್ನೇಹಿತರ ಜೊತೆ ಕುಳಿತು ಟಿವಿ ನೋಡುತ್ತಿದ್ದ ಕರಣ್, ಕಿಟಕಿ ಬಳಿಗೆ ಹೋಗಿ ಅಲ್ಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಮಡಿದ್ದಾನೆ. ಈ ಸಂದರ್ಭ ಕರಣ್ ಪಾನಮತ್ತನಾಗಿದ್ದನೆಂದು ವರದಿಯಾಗಿದೆ.

ಮೇಲಿನಿಂದ ಜಿಗಿದ ಬಳಿಕವೂ ಕರಣ್`ನನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಬರುವಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಮನೆ ಬಿಟ್ಟು ತೆರಳಿದ್ದ ಕರಣ್ ಬೆಳಗಿನ ಜಾವ ಮನೆಗೆ ಬಂದಿದ್ದ. ಈ ಸಂದರ್ಭ ಬೇಸರದಲ್ಲಿದ್ದ ಎನ್ನಲಾಗಿದೆ. ಕರಣ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಡೆತ್ ನೊಟ್ ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಕರಣ್ ಮೊಬೈಲನ್ನ ವಿಧಿ ವಿಜಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಅಮೆರಿಕಾ ಪ್ರವಾಸ ಹೊರಟಿದ್ದೇಕೆ?