Publish Date: Thu, 31 Aug 2017 (10:16 IST)
Updated Date: Thu, 31 Aug 2017 (10:18 IST)
ಮುಂಬೈ: ಮಹಾನಗರಿ ಮುಂಬೈಯಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ 5 ಮಹಡಿ ಕಟ್ಟಡವೊಂದು ಕುಸಿದಿದ್ದು 30 ಮಂದಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಮಹಾ ಮಳೆಯಿಂದಾಗಿ ನೀರು ತುಂಬಿ ಸುಮಾರು 70 ವರ್ಷಗಳಷ್ಟು ಹಳೆಯದಾದ ವಸತಿ ಸಂಕೀರ್ಣ ಕಟ್ಟಡ ಕುಸಿದಿದ್ದು, ಸುಮಾರು 30 ಮಂದಿ ಪ್ರಾಣಾಪಾಯದಲ್ಲಿದ್ದಾರೆ.
ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದುವರೆಗೆ ಇಬ್ಬರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಕಟ್ಟಡದೊಳಗೆ ಎಷ್ಟು ಮಂದಿಯಿದ್ದರು ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.