Webdunia - Bharat's app for daily news and videos

Install App

ಬ್ರಿಟನ್ ಪ್ರಧಾನಿ ರೇಸ್ ನಲ್ಲಿ " ರಿಶಿ ಸುನಕ್ " ಮುನ್ನಡೆ ...!!!

Webdunia
ಭಾನುವಾರ, 24 ಜುಲೈ 2022 (16:35 IST)
ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಅಂತಿಮ ಹಂತದಲ್ಲಿ ಉಳಿದಿರುವ ಇಬ್ಬರು ಮುಖಂಡರಲ್ಲಿ ಒಬ್ಬರಾಗಿರುವ ಮಾಜಿ ಸಚಿವ ರಿಷಿ ಸುನಾಕ್, ಈ ರೇಸ್‌ನಲ್ಲಿ ತಾನು ಬಲಿಪಶು ಆಗುವುದರಲ್ಲಿ ತನಗೆ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.
 
ಪ್ರಧಾನಿ ಬೋರಿಸ್ ಜಾನ್ಸನ್ ಕಾರ್ಯವೈಖರಿಯನ್ನು ಟೀಕಿಸಿ ಅವರ ಸಂಪುಟದಲ್ಲಿ ವಿತ್ತಸಚಿವರಾಗಿದ್ದ ಸುನಾಕ್ ರಾಜೀನಾಮೆ ಸಲ್ಲಿಸಿದ್ದರು.
 
ಸಚಿವರ ಸರಣಿ ರಾಜೀನಾಮೆ ಜಾನ್ಸನ್ ರಾಜೀನಾಮೆಗೆ ಕಾರಣವಾಗಿತ್ತು. ಈ ಕಾರಣದಿಂದ ಪಕ್ಷದೊಳಗಿನ ಜಾನ್ಸನ್ ಬೆಂಬಲಿಗರು ತನ್ನನ್ನು ವಿರೋಧಿಸಬಹುದು ಎಂದು ಪರೋಕ್ಷವಾಗಿ ಸುನಾಕ್ ಹೇಳಿದ್ದಾರೆ.
 
ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾಗಿರುವ ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಹುಹಂತದ ಮತದಾನ ಪ್ರಕ್ರಿಯೆಯ ಇದುವರೆಗಿನ ಎಲ್ಲಾ ಹಂತಗಳಲ್ಲೂ ರಿಷಿ ಸುನಾಕ್ ಮುನ್ನಡೆ ಕಾಯ್ದುಕೊಂಡು ಬಂದಿದ್ದಾರೆ. ಅಂತಿಮ ಹಂತದಲ್ಲಿ ಸುನಾಕ್ ಮತ್ತು ಮಾಜಿ ಸಚಿವೆ ಲಿರ್ ಟ್ರೂಸ್ ಮಧ್ಯೆ ಸ್ಪರ್ಧೆ ನಡೆಯಲಿದ್ದು ಸೆಪ್ಟಂಬರ್ 5ರಂದು ಫಲಿತಾಂಶ ಘೋಷಿಸಲಾಗುವುದು. ಮುಂದಿನ ಹಂತದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಸುಮಾರು 2 ಲಕ್ಷ ಸದಸ್ಯರು ಮತದಾನ ಮಾಡಲಿದ್ದಾರೆ. ಗುರುವಾರ ನಡೆದ ಮತದಾನ ಪೂರ್ವ ಸಮೀಕ್ಷೆಯಲ್ಲಿ ಲಿರ್ ಅವರು ಸುನಾಕ್ ವಿರುದ್ಧ 24 ಅಂಕಗಳ ಮುನ್ನಡೆ ಸಾಧಿಸಿರುವುದಾಗಿ ವರದಿಯಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments