Select Your Language

Notifications

webdunia
webdunia
webdunia
webdunia

ಪುಷ್ಪಾ" ಸಿನಿಮಾ ನೋಡಿ ( ಫಿಲ್ಮಿ ಸ್ಟೈಲ್ ನಲ್ಲಿ ) ಗಾಂಜಾ ಮಾರಾಟಕ್ಕೆ ಯುವಕರು ...!!!

ಪುಷ್ಪಾ
ಬೆಂಗಳೂರು , ಭಾನುವಾರ, 24 ಜುಲೈ 2022 (16:02 IST)
ತೆಲುಗಿನ ಪುಷ್ಪಾ ಸಿನಿಮಾದಿಂದ ಪ್ರೇರಣೆಗೊಂಡ ತಂಡ ಬುಲೆರೊ ಗೂಡ್ಸ್ ವಾಹನದ ಕೆಳಭಾಗದಲ್ಲಿ ಪ್ರತ್ಯೇಕ ಬಾಕ್ಸ್ ಮಾಡಿಕೊಂಡು ಬೀದರ್‌ನಿಂದ ಗಾಂಜಾ ತಂದು ನಗರದಲ್ಲಿ ಪೆಡ್ಲರ್‌ಗಳಿಗೆ ಮಾರಾಟ ಮಾಡುತ್ತಿದ್ದರು. ಈ ಜಾಲವನ್ನು ಬೇಧಿಸಿರುವ ಬೇಗೂರು ಪೊಲೀಸರ ಒಂದು ಕೋಟಿ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.
 
ಕುಣಿಗಲ್ ತಾಲೂಕಿನ ಕೆ.ಆರ್.ಅರವಿಂದ್(26), ತಾವರೆಕೆರೆ ನಿವಾಸಿ ಪವನ್ ಕುಮಾರ್ (27), ಮಂಗಳೂರು ಜಿಲ್ಲೆಯ ಅಮ್ಜದ್ ಇತಿಯಾರ್ ಅಲಿಯಾಸ್ ಇಮ್ರಾನ್ ಅಲಿಯಾಸ್ ಇರ್ಷಾದ್ (27) ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬೀದರ್‌ನ ಭಾಲ್ಕಿ ಪ್ರಭು(27), ದಕ್ಷಿಣ ಕನ್ನ ಜಿಲ್ಲೆಯ ನಜೀಮ್ (26) ಮತ್ತು ಆಂಧ್ರಪ್ರದೇಶದ ಭೂಪಾಲ ಪಟ್ಟಣಂನ ಪತ್ತಿ ಸಾಯಿ ಚಂದ್ರ ಪ್ರಕಾಶ್ (19) ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಬಂಧಿತ ಏಳು ಮಂದಿ ಆರೋಪಿಗಳ ವಿರುದ್ಧ ಆಂಧ್ರಪ್ರದೇಶ, ಬೆಂಗಳೂರು ನಗರ, ಗ್ರಾಮಾಂತರದ ವಿವಿಧ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ, ಎನ್‌ಡಿಪಿಎಸ್ ಹಾಗೂ ದರೋಡೆ ಸೇರಿ ಹಲವು ಅಪರಾಧ ಪ್ರಕರಣಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳು ಜೈಲಿಗೆ ಹೋದಾಗ ಪರಸ್ಪರ ಪರಿಚಯವಾಗಿ, ದೊಡ್ಡ ಮಟ್ಟದಲ್ಲಿ ಮಾದಕ ವಸ್ತು ಮಾರಾಟ ಜಾಲ ವಿಸ್ತರಿಸಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬದಂದೇ ಕೊಲೆಯಾದ ಯುವಕ .." ಬಾಸ್ " ಯಾರು ಅಂತ ಗೊತ್ತಿಲ್ಲ ಅಂದಿದ್ದಕ್ಕೆ ಕೊಲೆ ಮಾಡಿದ ಪಾಪಿಗಳು ...!!!!!