Select Your Language

Notifications

webdunia
webdunia
webdunia
webdunia

ಮಾಜಿ ಶಾಸಕನ ಮದುವೆ ಸಿಕ್ಕಾಪಟ್ಟೆ ಟ್ರೋಲ್ ...!!!! ಯಾಕೆ ಗೊತ್ತಾ ???

ಮಾಜಿ ಶಾಸಕನ  ಮದುವೆ ಸಿಕ್ಕಾಪಟ್ಟೆ  ಟ್ರೋಲ್ ...!!!! ಯಾಕೆ ಗೊತ್ತಾ ???
ಬೆಂಗಳೂರು , ಭಾನುವಾರ, 24 ಜುಲೈ 2022 (15:10 IST)
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ  ಎರಡನೇ ಮದುವೆ ಪ್ರಕರಣವು ಇದೀಗ ಟ್ರೋಲಿಗರಿಗೆ ಆಹಾರವಾಗಿದೆ.
 
ಕ್ಷೇತ್ರದಲ್ಲಿ ಪೂಜಾಶ್ರೀ ಹೆಸರು ಯಾವಾಗೆಲ್ಲಾ ಪ್ರಸ್ತಾಪವಾಗಿತ್ತು ಎಂದು ಕ್ಷೇತ್ರದ ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಕಳೆದ ಜುಲೈ 1ರಂದು ಇಳಕಲ್​ ಪಟ್ಟಣದಲ್ಲಿ ನಡೆದಿದ್ದ ಐಪಿಎಲ್ ಪ್ರಿಮಿಯರ್ ಲೀಗ್ ಉದ್ಘಾಟನೆ ವೇಳೆ ನಟಿ ಪೂಜಾಶ್ರೀ ಅವರ ಹೆಸರು ಮೈಕ್​ನಲ್ಲಿ ಪ್ರಕಟವಾಗಿತ್ತು ಎಂದು ಹೇಳಲಾಗಿದೆ.
 
ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಗೆಂದು ಇಳಕಲ್​ಗೆ ಹಲವು ಕಿರುತೆರೆ ಹಾಗೂ ಹಾಗೂ ಹಿರಿತೆರೆ ಕಲಾವಿದರನ್ನು ಕರೆಸಲಾಗಿತ್ತು. ಈ ವೇಳೆ ಕಲಾವಿದರ ಹೆಸರು ಹೇಳುವಾಗ ಪೂಜಾಶ್ರಿ ಹೆಸರನ್ನು ಸಹ ಘೋಷಿಸಲಾಗಿತ್ತು. ಇತರ ಕಲಾವಿದರು ಎದ್ದು ನಿಂತು ಕೈ ಬೀಸಿ, ಕೈ‌ ಮುಗಿದಿದ್ದರು. ಆದರೆ ಪೂಜಾಶ್ರಿ ಹೆಸರು ಘೋಷಣೆಯಾದರೂ ಆಕೆ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.
 
ಕಲಾವಿದರ ಪಟ್ಟಿಯಲ್ಲಿ ಪೂಜಾಶ್ರಿ ಹೆಸರು ಇತ್ತಾದರೂ, ಆಮಂತ್ರಣ ಪತ್ರಿಕೆಯಲ್ಲಿ ವಿಜಯಾನಂದ ಕಾಶಪ್ಪನವರ ಅವರ ಧರ್ಮಪತ್ನಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವೀಣಾ ಅವರ ಹೆಸರು ಕಾಣಿಸಿರಲಿಲ್ಲ.
 
ಹುನಗುಂದ ಶಾಸಕ ದೊಡ್ಡನಗೌಡ ಪಾಟಿಲ್ ಅಭಿಮಾನಿ ಬಳಗ ಗ್ರೂಪ್​ನಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯಾನಂದ ಕಾಶಪ್ಪನವರ ಎರಡನೇ ಮದುವೆ ಆಗಿದ್ದನ್ನು ಪ್ರಸ್ತಾಪಿಸಿ ಟ್ರೋಲ್ ಮಾಡಿದ್ದಾರೆ. ಸಾಹೇಬರು ಎಲ್ಲದಕ್ಕೂ ಮಾಧ್ಯಮದವರಿಗೆ ದಾಖಲೆ ಕೇಳುತ್ತಾರೆ. ಇನ್ನು ಸ್ವಲ್ಪ ದಿನ ಕಾಯಿರಿ. ನಿಮ್ಮ ಎರಡನೇ ಹೆಂಡತಿಯ ಹೆಣ್ಣು ಮಗು ದಾಖಲೆ ತಗೊಂಡು ಬರುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪಘಾತದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸಾವು : ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ