ಕುಡಿದ ಅಮಲಿನಲ್ಲಿ" ಮಕ್ಕಳಿಗೆ ಪಾಠ ಭಾರತದಲ್ಲಿ " ಮಾದರಿ ಶಿಕ್ಷ ಕಿ "..!!!

Webdunia
ಭಾನುವಾರ, 24 ಜುಲೈ 2022 (16:26 IST)
ಛತ್ತೀಸ್‌ಗಢದ ಟಿಕಾಯತ್‌ಗಂಜ್‌ನಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಶಿಕ್ಷಕಿಯೊಬ್ಬಳು ಕಂಠಪೂರ್ತಿ ಕುಡಿದು ಶಾಲೆಗೆ ಬಂದಿದ್ದಾಳೆ. ಮಕ್ಕಳಿಗೆ ಪಾಠ ಹೇಳುವಷ್ಟು ತ್ರಾಣವೇ ಅವಳಿಗೆ ಇರಲಿಲ್ಲ. 
 
ಅದೇ ಸಮಯದಲ್ಲಿ ಶಿಕ್ಷಣಾಧಿಕಾರಿ ಶಾಲೆಯ ಪರಿಶೀಲನೆಗಾಗಿ ಸ್ಥಳಕ್ಕೆ ಬಂದರು. ಕುಡಿದು ತರಗತಿಯಲ್ಲಿ ಮಲಗಿದ್ದ ಶಿಕ್ಷಕಿಯನ್ನು ನೋಡಿ ದಂಗಾಗಿ ಹೋಗಿದ್ದಾರೆ. ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದ್ರೂ ಸಾಧ್ಯವಾಗಲೇ ಇಲ್ಲ. ಬೆಳಗ್ಗೆ 11 ಗಂಟೆ ಸುಮಾರಿಗೆ ಶಿಕ್ಷಣಾಧಿಕಾರಿ ಶಾಲೆಗೆ ಆಗಮಿಸಿದ್ದರು.
 
ಶಿಕ್ಷಕಿ ನೆಲದ ಮೇಲೆ ಬಿದ್ದಿರುವುದನ್ನು ನೋಡಿ ಆಕೆಯ ಆರೋಗ್ಯ ಹದಗೆಟ್ಟಿರಬಹುದು ಎಂದುಕೊಂಡಿದ್ದಾರೆ. ಈ ಬಗ್ಗೆ ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ವಿಚಾರಿಸಿದ್ದಾರೆ. ಆಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಶಿಕ್ಷಕಿ ಮದ್ಯದ ಅಮಲಿನಲ್ಲಿ ಆ ರೀತಿ ಮಲಗಿರೋದಾಗಿ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ಟಿಕಾಯತ್‌ಗಂಜ್‌ನ ಈ ಪ್ರಾಥಮಿಕ ಶಾಲೆ ಛತ್ತೀಸ್‌ಗಢದ ರಾಜಧಾನಿ ರಾಯಪುರದಿಂದ ಸುಮಾರು 430 ಕಿಮೀ ದೂರದಲ್ಲಿದೆ. ಈ ಪ್ರಾಥಮಿಕ ಶಾಲೆಯಲ್ಲಿ 54 ಮಕ್ಕಳು ಓದುತ್ತಿದ್ದಾರೆ.
 
ಶಿಕ್ಷಕರ ಸ್ಥಿತಿಯನ್ನು ನೋಡಿದ ಶಿಕ್ಷಣಾಧಿಕಾರಿ ಕೂಡಲೇ ಎಸ್ಪಿಗೆ ಮಾಹಿತಿ ನೀಡಿದ್ರು. ಶಿಕ್ಷಕರ ವೈದ್ಯಕೀಯ ಪರೀಕ್ಷೆಗೆ ಸಹಾಯ ಮಾಡುವಂತೆ ಕೋರಿದರು. ನಂತರ ಇಬ್ಬರು ಮಹಿಳಾ ಪೇದೆಗಳು ಸ್ಥಳಕ್ಕಾಗಮಿಸಿ ಶಿಕ್ಷಕಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.
 
 ಆರೋಪಿ ಶಿಕ್ಷಕಿ ಕಳೆದ ಹಲವು ದಿನಗಳಿಂದ ಕುಡಿದ ಮತ್ತಿನಲ್ಲಿ ಶಾಲೆಗೆ ಬರುತ್ತಿರುವುದು ಮಕ್ಕಳ ವಿಚಾರಣೆ ವೇಳೆ ತಿಳಿದು ಬಂದಿದೆ. ಕೂಡಲೇ ಈ ಚಟ ಬಿಡುವಂತೆ ಶಿಕ್ಷಕರಿಗೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪತ್ನಿ ಚೆನ್ನಮ್ಮ ನಿಧನ: ಡಿ ದೇವೇಗೌಡ ಜತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಅಹಮದಾಬಾದ್ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ಮೃತರ ಕುಟುಂಬಕ್ಕೆ ಮೋದಿ ಪರಿಹಾರ ಘೋಷಣೆ

ಟಿಎಂಸಿ ಬಿಟ್ಟು ಹೋದವರು ಮತ್ತೇ ವಾಪಾಸ್ ಬಂದ್ರೆ ನಾನು ರಾಜೀನಾಮೆ ಕೊಡ್ತೇನೆ: ಅಭಿಷೇಕ್ ಬ್ಯಾನರ್ಜಿ

ಚೆನ್ನಮ್ಮರ ಮೇಲೆ ದೇವೇಗೌಡರ ಕುಟುಂಬದ ಸದಸ್ಯನಿಂದಲೇ ನಡೆದಿದ್ದು ಆ್ಯಸಿಡ್ ದಾಳಿ, ಎಲ್ಲಿ, ಯಾವಾಗ ಗೊತ್ತಾ

ಬಂಡಾಯ ಟಿಎಂಸಿ, ಯುಬಿಟಿ ಸೇನಾ ಸಂಸದರ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಇಂದು ನಿರ್ಧಾರ ಸಾಧ್ಯತೆ

ಮುಂದಿನ ಸುದ್ದಿ
Show comments