Publish Date: Sun, 08 Jul 2018 (14:18 IST)
Updated Date: Sun, 08 Jul 2018 (14:27 IST)
ಮದುವೆಯ ದಿನದಂದು ಕಲ್ಯಾಣ ಮಂಟಪದಿಂದ ಮದುಮಗಳು ಪರಾರಿಯಾದ ಘಟನೆ ನಡೆದಿದೆ.
ಸಿನಿಮೀಯ ರೀತಿಯಲ್ಲಿ ಕಲ್ಯಾಣ ಮಂಟಪದಿಂದ ಮದುಮಗಳು ಪರಾರಿಯಾಗಿದ್ದಾಳೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಶ್ರೀಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ.
ಎಚ್ ಡಿ ಕೋಟೆ ತಾಲೂಕಿನ ಹೊಸಹಳ್ಳಿ ಗ್ರಾಮದ ಕೃಷ್ಣ ನಾಯಕ ಮತ್ತು ತಾಯಮ್ಮ ಎಂಬುವವರ ಪುತ್ರಿ ನಂದಿನಿ ಕಲ್ಯಾಣ ಮಂಟಪದಿಂದ ಪರಾರಿಯಾದ ವಧು ಆಗಿದ್ದಾಳೆ.
ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದ ನಾರಾಯಣ ಎಂಬಾತನ ಜತೆ ನಂದಿನಿ ವಿವಾಹ ಇಂದು ಅದ್ಧೂರಿಯಾಗಿ ನಡೆಯಬೇಕಿತ್ತು. ರಾತ್ರಿ ವಿವಾಹದ ಸಕಲ ಸಿದ್ಧತೆ ನಡೆದಿತ್ತು. ಇಂದು ಬೆಳಿಗ್ಗೆ ವಧು ನಾಪತ್ತೆ ನಾಪತ್ತೆಯಾಗಿದ್ದಾಳೆ.
ಪರಾರಿಯಾಗಿರುವ ವಧು ನಂದಿನಿ ತನ್ನ ಪ್ರಿಯಕರ ಜತೆ ಓಡಿಹೋಗಿರುವ ಶಂಕೆ ವ್ಯಕ್ತವಾಗಿದೆ. ವರ ಕಕ್ಕಾಬಿಕ್ಕಿಯಾದರೆ ವಧುವಿನ ಕುಟುಂಬದವರು ಕಣ್ಣೀರು ಇಡುತ್ತಿದ್ದಾರೆ.