Publish Date: Thu, 24 May 2018 (16:48 IST)
Updated Date: Thu, 24 May 2018 (16:56 IST)
ಮೈಸೂರು: ಪ್ರಿಯಕರ ಢಗಾರ್ ಎಂಬ ಪದದಿಂದ ಬೈದದ್ದಕ್ಕೆ ಬೇಸರಗೊಂಡ ಮಾಡೆಲ್ ಧನ್ಯಾ (19) ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಧನ್ಯಾ ಮೇಟಗಳ್ಳಿ ನಿವಾಸಿ ಬೀನ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಧನ್ಯಾ ಬೀನ್ ಗೆ ಮದುವೆ ಮಾತುಕತೆಗೆ ಬರುವಂತೆ ಮನೆಗೆ ಆಹ್ವಾನಿಸಿದ್ದರು. ಆದರೆ ಬೀನ್ ಆಕೆಯ ಮನೆಗೆ ಬರಲು ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಧನ್ಯಾ ಬೀನ್ ಜೊತೆಗೆ ಜಗಳವಾಡಿದ್ದಾಳೆ. ಇದಾದ ಬಳಿಕ ಬೀನ್ ಧನ್ಯಾ ತಂದೆ ಅವರು ನಡೆಸುತ್ತಿದ್ದ ಅಂಗಡಿ ಮುಂದೆಯೇ ಧನ್ಯಾಗೆ ಆವಾಜ್ ಹಾಕಿದ್ದಾನೆ. ಇದರಿಂದ ಬೇಸತ್ತ ಧನ್ಯಾ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಎರಡು ಕಿರುಚಿತ್ರದಲ್ಲಿ ನಟಿಸಿದ್ದ ಧನ್ಯಾ, ಬಿಡುಗಡೆ ಆಗಬೇಕಿರುವ 'ಭರವಸೆ' ಎಂಬ ಕಿರುಚಿತ್ರದಲ್ಲಿ ಅಭಿನಯಿಸಿದ್ದರು. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ