Publish Date: Wed, 04 Apr 2018 (07:10 IST)
Updated Date: Wed, 04 Apr 2018 (07:14 IST)
ಬೆಂಗಳೂರು : ‘ಕಿನ್ನರಿ’ ಧಾರಾವಾಹಿಯ ನಟ ಕಿರಣ್ ರಾಜ್ ಅವರು ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿರುವುದಾಗಿ ಆರೋಪಿಸಿ ಮುಂಬೈ ಮಾಡೆಲ್ ಒಬ್ಬರು ದೂರು ದಾಖಲಿಸಿರುವ ಹಿನ್ನಲೆಯಲ್ಲಿ ಇದೀಗ ನಟ ಕಿರಣ್ ರಾಜ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಟ ಕಿರಣ್ ರಾಜ್ ಅವರು ತನ್ನಜೊತೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದು, ನಂತರ ಮದುವೆಯಾಗದೇ ವಂಚಿಸಿರುವುದಾಗಿ ಹಾಗೂ ಮುಂಬೈಗೆ ಕರೆದೊಯ್ದು ಕಾರಿನಲ್ಲಿ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ತಿಳಿಸಿ ಮಾಡೆಲ್ ನಟನ ವಿರುದ್ದ ದೂರು ನೀಡಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ನಟ ಕಿರಣ್ ರಾಜ್ ಕೂಡ ಮಾಡೆಲ್ ವಿರುದ್ದ ‘ನಾನು ಹಲ್ಲೆ ನಡೆಸಿಲ್ಲ. ನನ್ನ ತಂದೆ-ತಾಯಿ ಮೇಲೆ ಆಕೆ ಹಲ್ಲೆ ನಡೆಸಿದ್ದಾರೆ. ನನ್ನ ಪೋಷಕರನ್ನು ಗೃಹಬಂಧನದಲ್ಲಿಡುವ ಪ್ರಯತ್ನ ಮಾಡಿದ್ದಾಳೆ ಎಂದು ಪ್ರತಿ ದೂರು ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಎಫ್‍ಐಆರ್ ದಾಖಲಿಸಿದ ಆರ್.ಆರ್.ನಗರ ಪೊಲೀಸರು ಇದೀಗ ನಟ ಕಿರಣ್ ರಾಜ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ