Select Your Language

Notifications

webdunia
webdunia
webdunia
webdunia

ರಾಜರಥ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದು ಯಾವ ಕಾರಣಕ್ಕಾಗಿ ಗೊತ್ತಾ…?

ರಾಜರಥ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದು ಯಾವ ಕಾರಣಕ್ಕಾಗಿ ಗೊತ್ತಾ…?
ಬೆಂಗಳೂರು , ಬುಧವಾರ, 4 ಏಪ್ರಿಲ್ 2018 (07:03 IST)
ಬೆಂಗಳೂರು : ರಾಜರಥ ನೋಡದೇ ಇರೋರು ಕಚಡಾ ನನ್ಮಕ್ಳು ಎಂದು ಹೇಳಿದ್ದ ರಾಜರಥ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರು ಇದೀಗ ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದಾರೆ.


ರಾಜರಥ ಸಿನಿಮಾ ಬಿಡುಗಡೆಗೂ ಮೊದಲು ರೇಡಿಯೋವೊಂದರ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿರ್ದೇಶಕ ಅನೂಪ್ ಭಂಡಾರಿ, ನಾಯಕ ನಿರೂಪ್ ಭಂಡಾರಿ ಮತ್ತು ಚಿತ್ರದ ನಾಯಕಿ ಅವಾಂತಿಕಾ ಶೆಟ್ಟಿ ಅವರು ಆ ವೇಳೆ ರಾಜರಥ ಸಿನಿಮಾ ನೋಡದವರು “ಕಚಡ ನನ್ ಮಕ್ಳು” ಎಂದು ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಟೀಕೆಗೆ ಗುರಿಯಾಗಿದೆ.


ಆದರೆ ಇದೀಗ ರಾಜರಥ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ,’ ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನುದ್ದೇಶಿಸಿ ಹೇಳಿದ ಮಾತಲ್ಲ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ನಿಮ್ಮ ಆಶಿರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜರಥ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಮೇಲೆ ಕಿಡಿಕಾರಿದ ಒಳ್ಳೆ ಹುಡುಗ ಪ್ರಥಮ್