Select Your Language

Notifications

webdunia
webdunia
webdunia
webdunia

ಯೂಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ 'ರಾಜರಥ' ಟ್ರೇಲರ್ (ವಿಡಿಯೋ ನೋಡಿ)

ಯೂಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ 'ರಾಜರಥ' ಟ್ರೇಲರ್ (ವಿಡಿಯೋ ನೋಡಿ)
ಬೆಂಗಳೂರು , ಶನಿವಾರ, 30 ಡಿಸೆಂಬರ್ 2017 (10:13 IST)
ಬೆಂಗಳೂರು: ತಮ್ಮ ರಂಗಿತರಂಗ ಸಿನಿಮಾದ ಮೂಲಕ ಹೆಸರು ಗಳಿಸಿದ ನಿರ್ದೇಶಕ ಅನೂಪ್ ಭಂಡಾರಿ ಈಗ ‘ರಾಜರಥ’ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕನ ಮನಸ್ಸು ಸೆಳೆದಿದ್ದಾರೆ. ಅನೂಪ್‌ ಭಂಡಾರಿ ನಿರ್ದೇಶನದ ಈ ಸಿನಿಮಾ ಶುರುವಾಗುತ್ತಲೇ ಸಾಕಷ್ಟು ಸುದ್ದಿ ಮಾಡುತ್ತಿತ್ತು. ಇತ್ತೀಚೆಗೆ ಬಿಡುಗಡೆಯಾಗಿರುವ ಎರಡೂವರೆ ನಿಮಿಷದ ಟ್ರೇಲರ್ ಮತ್ತಷ್ಟು ಕುತೂಹಲ ಮೂಡಿಸುತ್ತಿದೆ.


ಒಂದಾನೊಂದು ಕಾಲ್ದಲ್ಲಿ, ಒಂದಾನೊಂದು ಊರಲ್ಲಿ, ಒಬ್ಳು ಸುಂದರವಾದ ಹುಡ್ಗಿ. ಅವಳಿಗೆ ಒಬ್ಬ ಹುಡ್ಗ ಇದ್ದ. ಆದ್ರೆ ಅವ್ನು ಹೀರೊ ಅಲ್ಲ...’ – ಹೀಗೆ ಸಣ್ಣದೊಂದು ಕನ್‌ಪ್ಯೂಷನ್‌ ಇಟ್ಟುಕೊಂಡೇ ಶುರುವಾಗುವ ‘ರಾಜರಥ’ ಸಿನಿಮಾದ ಟ್ರೇಲರ್‌ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಾಕಷ್ಟು ಸುದ್ದಿಮಾಡಿದೆ.


ಅಂದಹಾಗೆ ಈ ಚಿತ್ರದ ಹೀರೊ ನಿರೂಪ್‌ ಭಂಡಾರಿ. ಆದರೆ ಈ ಚಿತ್ರ ಅವರ ಕಥೆ ಅಲ್ಲವಂತೆ. ಇದು ‘ರಾಜರಥ’ದ ಕಥೆ. ಮೂಕ ರಾಜರಥ ಬಸ್‌ಗೆ ಪುನೀತ್‌ ರಾಜ್‌ಕುಮಾರ್‌ ತಮ್ಮ ಶಾರೀರ ಕೊಟ್ಟು ಅದರ ಕಥೆಯನ್ನು ಕೇಳುವಂತೆ ಮಾಡಿರುವುದೂ ಟ್ರೇಲರ್‌ನ ವಿಶೇಷ. ಈ ಟ್ರೇಲರ್ ಒಮ್ಮೆ ನೋಡಿದರೆ ನಿಮಗೂ ಕುತೂಹಲ ಮೂಡುತ್ತೆ.




ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ ಅಶ್ವತ್ಥ್ ಪುತ್ರ ಶಂಕರ್ ಅಶ್ವತ್ಥ್ ಈಗ ಉಬರ್ ಡ್ರೈವರ್!