Publish Date: Sat, 04 Mar 2017 (17:49 IST)
Updated Date: Sat, 04 Mar 2017 (17:52 IST)
ಸಿ.ಆರ್. ಮನೋಹರ್ ನಿರ್ಮಿಸುತ್ತಿರುವ ಹಾಗೂ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿರುವ ’ರೋಗ್’ ಚಿತ್ರದ ಟ್ರೇಲರ್ ದಶಲಕ್ಷ ಸಲ ವೀಕ್ಷಿಸಲಾಗಿದೆ. ಮಾರ್ಚ್ 1ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಈ ಟ್ರೇಲರ್ ಭರ್ಜರಿ ಹಿಟ್ ದಾಖಲಿಸಿದೆ.
ಮನೋಹರ್ ಅವರ ಸಹೋದರ ಇಶಾನ್ ನಾಯಕ ನಟನಾಗಿರುವ ಚಿತ್ರ ಇದು. ಆಕ್ಷನ್, ರೊಮ್ಯಾನ್ಸ್‌ಭರಿತ ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಿಸಲಾಗುತ್ತಿದೆ. ಮನ್ನಾರ ಚೋಪ್ರಾ, ಏಂಜೇಲಾ ಚಿತ್ರದ ನಾಯಕಿಯರು.
ಸುನಿಲ್ ಕಶ್ಯಪ್ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ತನ್ವಿ ಫಿಲಂಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಖಡಕ್ ಹುಡುಗನ ಕಾದಲ್ ಕಥೆ ಎಂಬುದು ಚಿತ್ರದ ಟ್ಯಾಗ್‌ಲೈನ್. ಕನ್ನಡ ಚಿತ್ರರಂಗಕ್ಕೆ ಅಪ್ಪು ಮತ್ತು ಯುವರಾಜ ಎಂಬ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ, ದಕ್ಷಿಣ ಭಾರತಕ್ಕೆ ಅನೇಕ ತಾರೆಗಳನ್ನು ಪರಿಚಯಿಸಿರುವ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್ ಕಟ್‍ನಲ್ಲಿ ಚಿತ್ರ ಮೂಡಿಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.