Publish Date: Sat, 04 Mar 2017 (17:45 IST)
Updated Date: Sat, 04 Mar 2017 (17:48 IST)
ರೂಪದರ್ಶಿ ಮತ್ತು ನಟಿ ಐಶಾ ಶರ್ಮಾ ಬಿಕಿನಿ ಚಿತ್ರಗಳಿಗೆ ಹೆಸರಾದವರು. ಈಗಾಗಲೆ ಕಿಂಗ್‌ಫಿಶರ್ 2016ರ ಕ್ಯಾಲೆಂಡರ್‌ನಲ್ಲಿ ತಮ್ಮ ಮೈಮಾಟ ತೋರಿದ್ದಾರೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ರೋಚಕ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಎಲ್ಲರ ಗಮನಸೆಳೆಯುವ ಬೆಡಗಿಯರಲ್ಲಿ ಒಬ್ಬರು.
ಸದ್ಯಕ್ಕೆ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ ಐಶಾ. ಮಾಲ್ಡೀವ್ಸ್ ಅಂದಚೆಂದದ ಜತೆಗೆ ತಮ್ಮ ಸೌಂದರ್ಯವನ್ನೂ ತೆರೆದಿಟ್ಟಿದ್ದಾರೆ. ಆ ಫೋಟೋಗೆ ಮಾರುದ್ದದ ಕ್ಯಾಪ್ಷನ್ ಸಹ ಕೊಟ್ಟಿದ್ದಾರೆ. ಬಾಲಿವುಡ್ ಬೆಡಗಿ ನೇಹಾ ಶರ್ಮಾ ಸಹೋದರಿ ಈ ಐಶಾ ಶರ್ಮಾ.
ಈ ಹಿಂದೆ ಬಾಲಿವುಡ್‌ನ ’ನಮಸ್ತೇ ಇಂಗ್ಲೆಂಡ್’ ಎಂಬ ಚಿತ್ರದಲ್ಲಿ ಐಶಾ ಅಭಿನಯಿಸಿದ್ದಾರೆ. ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದು. ಸದ್ಯಕ್ಕೆ ಐಶಾ ಶರ್ಮಾ ಅವರು ಪುರಿ ಜಗನ್ನಾಥ್ ಆಕ್ಷನ್ ಕಟ್‌ನಲ್ಲಿ ಮೂಡಿಬರುತ್ತಿರುವ ರೋಗ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.