Publish Date: Sat, 04 Mar 2017 (17:42 IST)
Updated Date: Sat, 04 Mar 2017 (17:44 IST)
ಬಾಲಿವುಡ್ ನಟಿ ಹಾಗೂ ಮಾಜಿ ಮಿಸ್ ಇಂಡಿಯಾ ಸೋನು ವಾಲಿಯಾ (53) ಅವರು ಮುಂಬೈನ ಬಂಗೂರ್ ನಗರ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಕಳೆದ ಕೆಲವು ದಿನಗಳಿಂತ ತನಗೆ ಅಸಭ್ಯ ಫೋನ್ ಕರೆಗಳು, ವಿಡಿಯೋಗಳನ್ನು ಅನಾಮಧೇಯ ವ್ಯಕ್ತಿಯಿಂದ ಬರುತ್ತಿರುವುದಾಗಿ ಅವರು ಎಫ್ಐಆರ್‌ನಲ್ಲಿ ದೂರಿದ್ದಾರೆ.
ಬೇರೆಬೇರೆ ನಂಬರ್‌ಗಳನ್ನು ಬಳಸಿ ಕರೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದು, ಪೊಲೀಸರು ಐಪಿಸಿ ಸೆಕ್ಷನ್ 354ರಡಿ ಹಾಗೂ ಐಟಿ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಧ್ಯಮಗಳ ಜತೆಗೆ ಮಾತನಾಡಿರುವ ಇನ್ಸ್‌ಪೆಕ್ಟರ್ ಶಿರೀಶ್ ಗಾಯಕ್‌ವಾಡ್ ಅವರು, ಸದ್ಯಕ್ಕೆ ಆ ನಂಬರ್ ಈಗ ಚಾಲನೆಯಿಲ್ಲ ಎಂದು ತಿಳಿಸಿದ್ದಾರೆ.
ಪ್ರತೀಕಾರ್, ಸ್ವರ್ಗ್ ಜೈಸಾ ಘರ್, ಕಸಂ, ಯಶ್, ಜಲ್ಲಾಡ್, ದಿಲ್ ಅಶ್ಮಾ ಹೈ ಸೇರಿದಂತೆ ಮುಂತಾದ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2000ರದಲ್ಲಿ ಯುಎಸ್ ಮೂಲದ ಹೋಟೆಲ್ ಉದ್ಯಮಿ ಸೂರ್ಯ ಪ್ರತಾಪ್ ಸಿಂಗ್ ಅವರನ್ನು ಮದುವೆಯಾಗಿದ್ದರು. 2010ರಲ್ಲಿ ಅವರು ನಿಧನರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.