Select Your Language

Notifications

webdunia
webdunia
webdunia
webdunia

‘ರಾಜರಥ’ ಸಿನಿಮಾ ವೀಕ್ಷಿಸಿದ ಕಿಚ್ಚ ಸುದೀಪ್ ಹೇಳಿರುವುದಾದರೂ ಏನು ಗೊತ್ತಾ…?

‘ರಾಜರಥ’ ಸಿನಿಮಾ ವೀಕ್ಷಿಸಿದ ಕಿಚ್ಚ ಸುದೀಪ್ ಹೇಳಿರುವುದಾದರೂ ಏನು ಗೊತ್ತಾ…?
ಬೆಂಗಳೂರು , ಸೋಮವಾರ, 2 ಏಪ್ರಿಲ್ 2018 (06:24 IST)
ಬೆಂಗಳೂರು : ಅನುಪ್ ಭಂಡಾರಿ ಅವರು ನಿರ್ದೇಶಿಸಿದ ‘ರಂಗೀತರಂಗ’ ಚಿತ್ರ ಕನ್ನಡದ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ಆದರೆ ಇದೀಗ ಅವರು ನಿರ್ದೇಶಿಸಿರುವ ‘ರಾಜರಥ’ ಸಿನಿಮಾ ಮಾತ್ರ ಜನರು ನಿರೀಕ್ಷಿಸಿದ ಮಟ್ಟದಲ್ಲಿ ಇರಲಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟರೆ, ನಟ ಕಿಚ್ಚ ಸುದೀಪ್ ಅವರು ಮಾತ್ರ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಥಿಯೇಟರ್‌ನಲ್ಲಿ ‘ರಾಜರಥ’ ಸಿನಿಮಾವನ್ನು ವೀಕ್ಷಿಸಿ ಭಂಡಾರಿ ಸಹೋದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೂಪ್‌ ನಿರ್ದೇಶವನ್ನು ಮೆಚ್ಚಿಕೊಂಡಿರುವ ಸುದೀಪ್, ‘ಅವರೊಬ್ಬ ಅದ್ಭುತ ಪೇಂಟರ್ ಚಿತ್ರದಲ್ಲಿಯ ಪ್ರತಿ ಪಾತ್ರ, ದೃಶ್ಯದ ಬಗ್ಗೆ ಅವರ ಕಲ್ಪನೆ ಎಂತಹದು ಎಂಬುದು ತಿಳಿಯುತ್ತದೆ. ಸ್ಕ್ರಿಪ್ಟ್‌ಗಳ ಆಯ್ಕೆ ಹಾಗೂ ವೀಕ್ಷಕರ ನಾಡಿಮಿಡಿತ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಅನೂಪ್‌ ಅವರಲ್ಲಿದ್ದು, ನಾವು ಕೂಡ ಅದನ್ನು ಅನುಸರಿಸಬೇಕೆಂದು ಅನ್ನಿಸುತ್ತದೆ’ ಎಂದಿದ್ದಾರೆ.


ಹಾಗೇ ನಟ ನಿರೂಪ್ ಅವರ ಬಗ್ಗೆ ತಿಳಿಸಿದ ಸುದೀಪ್ ಅವರು,’ ನಟ ನಿರೂಪ್‌ ಅವರಲ್ಲಿ ಒಂದು ಸ್ಟ್ರೆಂತ್, ಟಾಲೆಂಟ್, ಇದೆ. ಅವರು ಭರವಸೆ ನಟ. ಅವರಲ್ಲಿಯ ಧ್ವನಿ ತುಂಬ ಚೆನ್ನಾಗಿದೆ ‘ಎಂದಿದ್ದಾರೆ. ಚಿತ್ರದಲ್ಲಿ ಕೆಲವು ನ್ಯೂನ್ಯತೆಗಳಿವೆ. ಅದರ ಜತೆಗೆ ಈ ಚಿತ್ರದಲ್ಲಿ ಒಂದು ಅದ್ಭುತ ಸ್ಟೋರಿಯಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸುವುದರ ಮೂಲಕ  ಸುದೀಪ್‌ ಅವರು ಚಿತ್ರದ ಬಗ್ಗೆ ಕೇಳಿ ಬಂದಿದ್ದ ಕಳಪೆ ವಿಮರ್ಶೆಗಳನ್ನು ಅಲ್ಲಗೆಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಅಭಿಮಾನಿ ಸಂಘ ಸೈಬರ್ ಕ್ರೈಂಗೆ ದೂರು ನೀಡಲು ಕಾರಣವಾದರೂ ಏನು …?