Select Your Language

Notifications

webdunia
webdunia
webdunia
webdunia

ಮದುವೆ ಮನೆಯಲ್ಲಿ ವಧು-ವರರ ಕಡೆಯವರ ನಡುವೆ ಮಾರಾಮಾರಿ

ಮದುವೆ ಮನೆಯಲ್ಲಿ ವಧು-ವರರ ಕಡೆಯವರ ನಡುವೆ ಮಾರಾಮಾರಿ
ನೆಲಮಂಗಲ , ಭಾನುವಾರ, 8 ಜುಲೈ 2018 (13:55 IST)
ವಧು - ವರನ ವಿವಾಹ ಮುರಿದುಬಿದ್ದು, ವಧು -ವರನ ಪೋಷಕರ ನಡುವೆ ಮದುವೆ ಮಂಟಪದಲ್ಲಿ ಮಾರಾಮಾರಿ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದಲ್ಲಿನ ವಿರಾಟ ಭವನ ಕಲ್ಯಾಣ ಮಂಟಪದಲ್ಲಿ ಈ  ವಿವಾಹ ನಡೆಯುತ್ತಿತ್ತು‌. ಬೆಂಗಳೂರಿನ ಪರಪ್ಪನ ಅಗ್ರಹಾರ ನಿವಾಸಿಗಳಾದ ವರ ಕೃಷ್ಣಮೂರ್ತಿ ಹಾಗೂ ವಧು ಸಂಧ್ಯಾ ನಡುವೆ ವಿವಾಹ ನಡೆವ ವೇಳೆಯಲ್ಲಿ ಪೋಷಕರ ನಡುವೆ ಮಾರಾಮಾರಿ ನಡೆದಿದೆ.

ವರ ಕೃಷ್ಣಮೂರ್ತಿ ಮನೆಯವರಿಗೆ ಗೊತ್ತಿಲ್ಲದೆ ವಿವಾಹ ನಡೆಯುತ್ತಿದ್ದು ಹುಡುಗ ಲಿಂಗಾಯತ, ಹುಡುಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆಂಬ ಮಾಹಿತಿ  ಸೇರಿದ್ದು, ಅಂತರ್ಜಾತಿ ವಿವಾಹ ಅನ್ನೋ ಆರೋಪ ಕೂಡ ಕೇಳಿ ಬಂದಿದೆ.

ಇನ್ನೂ ಅಪ್ರಾಪ್ತ ಮದುವೆಗೆ  ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿವಾಹ ನೋಂದಣಿ ಮಾಡಿಸಿದ್ದಾರೆ ಎಂದು ಹುಡುಗನ ಕಡೆಯವರು ಆರೋಪ ಮಾಡ್ತಿದ್ದಾರೆ. 

 
 

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಅಸ್ತಿತ್ವದ ಬಗ್ಗೆ ಸವಾಲೆಸೆದ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್