ಮದುವೆ ಮನೆಯ ಬೀಗ ಮುರಿದು ಕಳ್ಳತನ

Webdunia
ಭಾನುವಾರ, 1 ಜುಲೈ 2018 (22:33 IST)
ನಿನ್ನೆ ಅವರ ಮನೆಯಲ್ಲಿ ಮದುವೆ ದಿಬ್ಬಣದ ಸಂಭ್ರಮ ಮನೆ ಮಾಡಿತ್ತು, ಇಂದು ಮಗನ ಮದುವೆ ನಿಮಿತ್ತ ಮನೆಗೆ ಬೀಗ ಹಾಕಿ ಬಿಡದಿಗೆ ತೆರಳಿದ್ದರು. ಇದನ್ನೆ ಬಂಡವಾಳವಾಗಿ ಮಾಡಿಕೊಂಡ ಕಳ್ಳರು ಅಕ್ಕ ಪಕ್ಕದ ಮನೆಗಳಿಗೆ ಚಿಲಾಕ ಹಾಕಿ ಮದುವೆ ಮನೆಯಲ್ಲಿನ ಹಣ ಹಾಗೂ ಗೃಹ ಉಪಯೋಗಿ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ಇಂತಹ ಘಟನೆ ನಡೆದಿರುವುದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚೂಡೇನಹಳ್ಳಿ ಗ್ರಾಮದಲ್ಲಿ. ಗ್ರಾಮದ ಮುನಿಯಪ್ಪ ಎಂಬುವವರ ಮಗನ ಮದುವೆ ಸಮಾರಂಭ ಬಿಡದಿಯಲ್ಲಿದ್ದ ಕಾರಣ ನಿನ್ನೆ ಸಂಜೆ ಕುಟುಂಬದವರು ಮದುವೆಗೆ ತೆರಳಿದ್ದರು. ಇದನ್ನು ತಿಳಿದ ಕಳ್ಳರು ಕಳೆದ ರಾತ್ರಿ ಮದುವೆ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಹಣ, ಟಿವಿ, ಪ್ರಿಡ್ಜ್, ಮಿಕ್ಸಿ ಸೇರಿದಂತೆ ಐವತ್ತು ಸಾವಿರ ರೂ ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಇಂದು ಮುಂಜಾನೆ ಅಕ್ಕ ಪಕ್ಕದ ಮನೆಯವರು  ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಪೋಲಿಸರು ತನಿಖೆ ಕೈಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಮಗನೇ ಚಿನ್ನ ಕದ್ದಿದ್ದು ಎಂದಿದ್ದಕ್ಕೆ ಜೀವನೇ ತೆಗೆದ್ಬಿಟ್ಟ

ಇವರಿಗಿಂತ, ಇಂದಿರಾ ಗಾಂಧಿಗೆ ಧೈರ್ಯ ಜಾಸ್ತಿಯಾಗಿತ್ತು: ರಾಹುಲ್ ಗಾಂಧಿ ಕಿಡಿ

ಮಗಳ ಶವ ಮುಂದಿಟ್ಟು ಲಂಚಕ್ಕೆ ಬೇಡಿಕೆ: ತಂದೆಯ ಭಾವುಕ ಪೋಸ್ಟ್ ಬೆನ್ನಲ್ಲೇ ಪೊಲೀಸರಿಗೆ ಶಾಕ್‌

ಡೆಹ್ರಾಡೂನ್‌ನಲ್ಲಿ ಮೂರು ಆಭರಣ ಬಿಟ್ಟು ಬೇರೆ ಧರಿಸಿದ್ರೆ ಬೀಳುತ್ತೆ ₹50ಸಾವಿರ ದಂಡ

ಬಿಜೆಪಿ ಶಾಸಕ ರವಿಕುಮಾರ್ ಸಿಎಂ ಕಾರಿನಲ್ಲಿ ಇದ್ದಿದ್ದು ಯಾಕೆ: ನಿಜ ಕಾರಣ ಬಯಲು

ಮುಂದಿನ ಸುದ್ದಿ
Show comments