Publish Date: Wed, 27 Jun 2018 (11:04 IST)
Updated Date: Wed, 27 Jun 2018 (11:06 IST)
ಬೆಂಗಳೂರು: ಸಿದ್ದರಾಮಯ್ಯ ಕಿರಿಕ್ ಹೇಳಿಕೆಯಿಂದ ಕಾಂಗ್ರೆಸ್ ನಲ್ಲೇ ತಲ್ಲಣ ಶುರುವಾಗಿದೆಯಂತೆ! ಹೀಗಾಗಿ ಸಿದ್ದರಾಮಯ್ಯನವರ ಬಾಯಿಗೆ ಹಾಕಿಸಲು ಹೈಕಮಾಂಡ್ ಗೆ ಮೊರೆ ಹೋಗಲು ಸಂಸದರ ತಂಡವೊಂದು ಸಿದ್ಧವಾಗಿದೆಯಂತೆ!
ಹೀಗಂತ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ ಜೆಡಿಎಸ್ ಬೆಂಬಲ ಹಿಂಪಡೆಯಬಹುದು. ಹೀಗಾದರೆ ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್ ಕಾಂಗ್ರೆಸ್ ನ್ನು ಬೆಂಬಲಿಸಲ್ಲ. ಹಾಗೇನಾದರೂ ಆದರೆ ಕಾಂಗ್ರೆಸ್ ನ ಗತಿಯೇನು ಎಂದು ಕೆಲವು ಹಾಲಿ ಸಂಸದರು ಹೈಕಮಾಂಡ್ ಮೊರೆ ಹೋಗಲು ಸಿದ್ಧರಾಗಿದ್ದಾರಂತೆ.
ಒಂದು ವೇಳೆ ಕಾಂಗ್ರೆಸ್ ಬೆಂಬಲ ಹಿಂಪಡೆದರೂ ಜೆಡಿಎಸ್ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಬಹುದು. ಆದರೆ ಕಾಂಗ್ರೆಸ್ ಗೆ ಬೇರೆ ಆಯ್ಕೆಗಳಿಲ್ಲ. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯರನ್ನು ಸುಮ್ಮನಾಗಿಸಲು ಹೈಕಮಾಂಡ್ ಬಳಿ ಸಹಾಯ ಕೇಳಲು ರಾಜ್ಯ ನಾಯಕರ ನಿಯೋಗವೊಂದು ಸಿದ್ಧವಾಗಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.