Publish Date: Wed, 27 Jun 2018 (09:09 IST)
Updated Date: Wed, 27 Jun 2018 (09:11 IST)
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ವೈಮನಸ್ಯ ಸೃಷ್ಟಿಯಾಗಲು ಕಾರಣವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಡಿಸಿಎಂ ಪರಮೇಶ್ವರ್ ಗರಂ ಆಗಿದ್ದಾರೆ.
ಲೋಕಸಭೆ ಚುನಾವಣೆ ಮುಗಿಯಲಿ. ಆಮೇಲೆ ನೋಡೋಣ ಎಂದು ಸಿದ್ದರಾಮಯ್ಯ ಆಪ್ತರೊಂದಿಗೆ ಹೇಳಿಕೊಂಡಿರುವುದು ಪರಮೇಶ್ವರ್ ಸಿಟ್ಟಿಗೆ ಕಾರಣವಾಗಿದೆ. ಬಜೆಟ್ ಮಂಡನೆ ವಿಚಾರದಲ್ಲಿ ಸಿದ್ದರಾಮಯ್ಯ ತಕರಾರು ತೆಗೆದಿರುವುದರಿಂದ ಅಸಮಾಧಾನದ ಅಲೆ ಸೃಷ್ಟಿಯಾಗಿದೆ.
ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಪರಮೇಶ್ವರ್ ಸಿಟ್ಟು ಹೊರಹಾಕಿದ್ದಾರೆ. ನೀವು ಎಷ್ಟು ಬಾರಿ ಈ ಬಗ್ಗೆ ಪ್ರಶ್ನೆ ಕೇಳಿದರೂ ನಾನು ಹೀಗೇ ಉತ್ತರ ಹೇಳುವುದು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನೀವು ಏನಾದರೂ ಪ್ರಶ್ನೆ ಕೇಳುವುದಿದ್ದರೆ ಸಿದ್ದರಾಮಯ್ಯನವರನ್ನೇ ಕೇಳಿ ಎಂದು ಪರಮೇಶ್ವರ್ ಸಿಟ್ಟಿನಿಂದಲೇ ಉತ್ತರಿಸಿದ್ದಾರೆ. ಆ ಮೂಲಕ ತಮ್ಮ ಸಿಟ್ಟನ್ನು ಪರೋಕ್ಷವಾಗಿ ಹೊರ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.