Publish Date: Tue, 26 Jun 2018 (09:17 IST)
Updated Date: Tue, 26 Jun 2018 (09:19 IST)
ನವದೆಹಲಿ: ಇತ್ತೀಚೆಗಿನ ರಾಜಕೀಯದಲ್ಲಿ ಬೇರೆ ಪಕ್ಷಗಳ ನಾಯಕರನ್ನು ಬೆಂಬಲಿಸುವ ಜಾಯಮಾನ ಕಾಣುವುದೇ ಅಪರೂಪ. ಆದರೆ ಇದೀಗ ಕಾಂಗ್ರೆಸ್ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬೆಂಬಲಕ್ಕೆ ನಿಂತಿದೆ.
ಅದೂ ಅನ್ಯ ಧರ್ಮೀಯ ದಂಪತಿಗೆ ಪಾಸ್ ಪೋರ್ಟ್ ನೀಡಲು ಸಹಕರಿಸಿದ ವಿಚಾರಕ್ಕೆ ಕೆಲವರು ಸುಷ್ಮಾ ಮುಸ್ಲಿಂ ಧರ್ಮಕ್ಕೆ ಸೇರಿದರೇ? ಸುಷ್ಮಾ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಾರೆ ಎಂದೆಲ್ಲಾ ಟ್ರೋಲ್ ಮಾಡಿದ್ದರು. ಟ್ರೋಲ್ ಮಾಡಿದವರಿಗೆ ಮೃದುವಾಗಿಯೇ ಸುಷ್ಮಾ ತಿರುಗೇಟನ್ನೂ ಕೊಟ್ಟಿದ್ದರು.
ಆದರೆ ಇದೀಗ ವಿಪಕ್ಷ ಕಾಂಗ್ರೆಸ್ ತನ್ನ ಟ್ವಿಟರ್ ಪೇಜ್ ನಲ್ಲಿ ಸುಷ್ಮಾ ಬೆಂಬಲಿಸಿ ಟ್ವೀಟ್ ಮಾಡಿದೆ. ಎಂತಹಾ ಟ್ರೋಲ್ ಗೂ ಎದೆಗುಂದದೆ, ನಿಮ್ಮದೇ ಪಕ್ಷದವರ ಟೀಕೆಯನ್ನೂ ಕಡೆಗಣಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ. ಸುಷ್ಮಾ ಸ್ವರಾಜ್ ಅವರೇ ನಿಮಗೆ ಅಭಿನಂದನೆಗಳು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.