Publish Date: Tue, 26 Jun 2018 (09:02 IST)
Updated Date: Tue, 26 Jun 2018 (09:03 IST)
ಬೆಂಗಳೂರು: ಗುಜರಾತ್ ನಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮನೆಗೆ ಬಿಎಸ್ ಯಡಿಯೂರಪ್ಪ ರಹಸ್ಯವಾಗಿ ಭೇಟಿ ಕೊಟ್ಟಿರುವುದು ಇದೀಗ ರಾಜ್ಯ ರಾಜಕಾರಣದ ದಿಕ್ಸೂಚಿ ಬದಲಿಸುವ ಸೂಚನೆಯಾಗಿ ಕಾಣುತ್ತಿದೆ.
ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ವೈಮನಸ್ಯಗಳ ಲಾಭ ಪಡೆಯಲು ಬಿಎಸ್ ವೈ ಮತ್ತು ಅಮಿತ್ ಶಾ ಯೋಜನೆ ರೂಪಿಸಿದ್ದಾರೆಯೇ? ಈ ಮೂಲಕ ಕಾಂಗ್ರೆಸ್-ಜೆಡಿಎಸ್ ವೈಮನಸ್ಯಗಳ ಲಾಭ ಪಡೆದು ಹೊಸ ಸರ್ಕಾರ ರಚಿಸಲು ಅಥವಾ ಚುನಾವಣೆಗೆ ಸಿದ್ಧತೆ ನಡೆಸಲು ಈ ಭೇಟಿ ನಡೆದಿದೆಯೇ ಎಂಬ ಚರ್ಚೆಗಳು ಇದೀಗ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಇನ್ನೊಂದೆಡೆ ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧತೆ ಬಗ್ಗೆ, ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲು ಅಮಿತ್ ಶಾ ಅವರನ್ನು ಬಿಎಸ್ ವೈ ಭೇಟಿ ಮಾಡಿರಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದ ಪ್ರಸ್ತುತ ಸನ್ನಿವೇಶಗಳನ್ನು ಶಾ ಎದುರು ಬಿಎಸ್ ವೈ ಬಿಡಿಸಿಟ್ಟಿದ್ದಾರೆ ಎನ್ನಲಾಗುತ್ತಿದೆ. ಹಾಗಿದ್ದರೂ ಬಿಎಸ್ ವೈ-ಅಮಿತ್ ಶಾ ನಡುವಿನ ಈ ಭೇಟಿ ಹಲವು ಊಹಾಪೋಹಗಳಿಗೆ ಕಾರಣವಾಗಿರುವುದಂತೂ ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.