Publish Date: Wed, 27 Jun 2018 (10:03 IST)
Updated Date: Wed, 27 Jun 2018 (10:04 IST)
ಬೆಂಗಳೂರು: ಮುಂದಿನ ತಿಂಗಳು ವಿಧಾನಸಭೆಯಲ್ಲಿ ನಡೆಯಲಿರುವ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡನೆ ವೇಳೆ ತಾನು ಗೈರು ಹಾಜರಾಗಲಿದ್ದೇನೆ ಎಂದು ಸಚಿವ ಡಿಕೆ ಶಿವಕುಮಾರ್ ಮೊದಲೇ ಹೇಳಿಕೊಂಡಿದ್ದಾರೆ.
ಬಜೆಟ್ ವೇಳೆ ಸಚಿವ ಡಿಕೆಶಿ ಹಾಜರಾಗದೇ ಇದ್ದರೆ ವಿವಾದವಾಗುವುದು ಬೇಡವೆಂಬ ಉದ್ದೇಶಕ್ಕೆ ಮೊದಲೇ ಅವರು ತಮ್ಮ ಗೈರಿನ ವಿವರಣೆ ಕೊಟ್ಟಿದ್ದಾರೆ. ಆ ದಿನ ನಾನು ನಂಬಿರುವ ದೇವಾಲಯಕ್ಕೆ ತೆರಳಲಿರುವುದರಿಂದ ಬಜೆಟ್ ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಡಿಕೆಶಿ ಸ್ಪಷ್ಟನೆ ಕೊಟ್ಟಿದ್ದಾರೆ.
‘ನಾನು ನಂಬಿರುವ ಶಕ್ತಿ ದೇವತೆಯ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಹಾಗಾಗಿ ಆ ಸಂದರ್ಭದಲ್ಲಿ ನಾನು ಅಲ್ಲಿರಲೇಬೇಕಾಗುತ್ತದೆ. ಹೀಗಾಗಿ ಬಜೆಟ್ ನಲ್ಲಿ ಭಾವಹಿಸುತ್ತಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.