Publish Date: Tue, 25 Jan 2022 (09:40 IST)
Updated Date: Tue, 25 Jan 2022 (09:42 IST)
ಬೆಂಗಳೂರು: ನಾದಿನಿಯನ್ನು ಅಪಹರಿಸಿ ಮದುವೆಯಾಗುವಂತೆ ಪೀಡಿಸಿದ ಬಾವ ಹಾಗೂ ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಈಗಾಗಲೇ ಸಂತ್ರಸ್ತೆಯ ಅಕ್ಕನನ್ನು ಮದುವೆಯಾಗಿದ್ದಾನೆ. ಹಾಗಿದ್ದರೂ 20 ವರ್ಷದ ನಾದಿನಿ ಮೇಲೆ ಕಣ್ಣು ಹಾಕಿದ್ದ. ಕೆಲವು ದಿನಗಳ ಹಿಂದೆ ತನ್ನ ಸಹಚರರ ಸಹಾಯದಿಂದ ಆಕೆಯನ್ನು ಅಪಹರಿಸಿದ್ದ.
ಸಕಲೇಶಪುರದಲ್ಲಿ ಆರೋಪಿ ಜೊತೆಗಿದ್ದ ಸಂತ್ರಸ್ತೆಯನ್ನು ಇದೀಗ ಪೊಲೀಸರು ರಕ್ಷಿಸಿದ್ದಾರೆ. ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.