Select Your Language

Notifications

webdunia
webdunia
webdunia
webdunia

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಮೂವರು ಅಪ್ರಾಪ್ತರು

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಮೂವರು ಅಪ್ರಾಪ್ತರು
ಚೆನ್ನೈ , ಸೋಮವಾರ, 24 ಜನವರಿ 2022 (10:41 IST)
ಚೆನ್ನೈ: 9 ವರ್ಷದ ಬಾಲಕನಿಗೆ ಲೈಂಗಿಕವಾಗಿ ಚಿತ್ರಹಿಂಸೆ ನೀಡಿದ ಪ್ರಕರಣದಲ್ಲಿ ಮೂವರು ಅಪ್ರಾಪ್ತ ಬಾಲಕರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ನೆರೆಮನೆಯ ಬಾಲಕನಿಗೆ ಮೂವರು ಆರೋಪಿಗಳು ಲೈಂಗಿಕ ಕಿರುಕುಳ ನೀಡಿದ್ದರು. ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರಗಳು, ವಿಡಿಯೋಗಳನ್ನು ತೋರಿಸಿ ಅದರಲ್ಲಿರುವಂತೆ ಬಾಲಕನಿಗೆ ಮಾಡಿಸುತ್ತಾ ಚಿತ್ರಹಿಂಸೆ ನೀಡುತ್ತಿದ್ದರು.

ಸುಮಾರು ತಿಂಗಳುಗಳಿಂದಲೂ ಈ ಕೃತ್ಯ ನಡೆಯುತ್ತಿತ್ತು. ಇದರಿಂದಾಗಿ ಬಾಲಕ ಹೆದರಿ ಮನೆಯಿಂದಲೇ ಹೊರಗೆ ಬರುತ್ತಿರಲಿಲ್ಲ. ಮಾನಸಿಕ ಮತ್ತು ದೈಹಿಕವಾಗಿ ಅನಾರೋಗ್ಯಕ್ಕೀಡಾದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಾಲಕನ ಮೇಲೆ ನಡೆದ ದೌರ್ಜನ್ಯ ಅರಿತ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಮೂವರು ಅಪ್ರಾಪ್ತರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯ ಮೇಲೆ ಅತ್ಯಾಚಾರವೆಸಗಿದ ಮೂವರು ಅಪ್ರಾಪ್ತರು