Select Your Language

Notifications

webdunia
webdunia
webdunia
webdunia

ಅಂಗಾಂಗ ತೋರಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಲು ಹೊರಟ ಮಹಿಳೆ

ಅಂಗಾಂಗ ತೋರಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಲು ಹೊರಟ ಮಹಿಳೆ
ಲಕ್ನೋ , ಮಂಗಳವಾರ, 25 ಜನವರಿ 2022 (09:30 IST)
ಲಕ್ನೋ: ಆನ್ ಲೈನ್ ಮೂಲಕ ಎಂತೆಂತಹ ವಂಚನೆ ನಡೆಯುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಹಿಳೆಯೊಬ್ಬಳು ವಿಡಿಯೋ ಕಾಲ್ ಮೂಲಕವೇ ಖಾಸಗಿ ಬ್ಯಾಂಕ್ ನ ಮ್ಯಾನೇಜರ್ ಒಬ್ಬರನ್ನು ಕೆಡವಲು ಹೊರಟ ಘಟನೆ ನಡೆದಿದೆ.

ಪರಿಚಿತರ ಮೂಲಕ ಬ್ಯಾಂಕ್ ಮ್ಯಾನೇಜರ್ ಗೆ ಮಹಿಳೆಯ ಪರಿಚಯವಾಗಿತ್ತು. ಆಕೆ ಮ್ಯಾನೇಜರ್ ಜೊತೆಗೆ ಸ್ನೇಹ ಸಂಪಾದಿಸಿ ವಿಡಿಯೋ ಕರೆ ಮಾಡಿದ್ದಳು. ವಿಡಿಯೋ ಕರೆ ವೇಳೆ ತನ್ನ ಖಾಸಗಿ ಅಂಗಾಂಗಗಳ ದರ್ಶನ ಮಾಡಿದ್ದಾಳೆ. ಇದನ್ನು ಮ್ಯಾನೇಜರ್ ನೋಡುತ್ತಿದ್ದಂತೇ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಬಳಿಕ ಆ ವಿಡಿಯೋಗಳನ್ನಿಟ್ಟುಕೊಂಡು ಬ್ಲ್ಯಾಕ್ ಮೇಲ್ ಗೆ ಮುಂದಾಗಿದ್ದಾಳೆ.

ಇದರಿಂದ ಬೆದರಿದ ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಮಹಿಳಾ ನ್ಯಾಯಮೂರ್ತಿ ನೇಮಕ