Select Your Language

Notifications

webdunia
webdunia
webdunia
webdunia

ಒಪ್ಪಿಗೆಯಿಲ್ಲದೇ ಫೋನ್ ಖರೀದಿಸಿದ ಪತ್ನಿಯ ಕೊಲೆಗೆ ಸ್ಕೆಚ್ ಹಾಕಿದ!

ಒಪ್ಪಿಗೆಯಿಲ್ಲದೇ ಫೋನ್ ಖರೀದಿಸಿದ ಪತ್ನಿಯ ಕೊಲೆಗೆ ಸ್ಕೆಚ್ ಹಾಕಿದ!
ಕೋಲ್ಕೊತ್ತಾ , ಮಂಗಳವಾರ, 25 ಜನವರಿ 2022 (09:08 IST)
ಕೋಲ್ಕೊತ್ತಾ: ತನ್ನ ಒಪ್ಪಿಗೆಯಿಲ್ಲದೇ ಪತ್ನಿ ಸ್ಮಾರ್ಟ್ ಫೋನ್ ಖರೀದಿಸಿದ್ದಕ್ಕೆ ಕೋಪಗೊಂಡ ಗಂಡ ಸುಪಾರಿ ಕಿಲ್ಲರ್ ಗಳಿಗೆ ಗುತ್ತಿಗೆ ನೀಡಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.

ಪತ್ನಿ ತನ್ನ ಒಪ್ಪಿಗೆಯಿಲ್ಲದೇ ಫೋನ್ ಖರೀದಿಸಿದ್ದಕ್ಕೆ ಆಕೆಯ ಕೊಲೆಗೆ ಗೂಂಡಾಗಳನ್ನು ನೇಮಿಸಿದ್ದ. ಸುಪಾರಿ ಪಡೆದಿದ್ದ ಗೂಂಡಾಗಳು ಮಹಿಳೆಯ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ್ದರು. ಅದೃಷ್ಟವಶಾತ್ ನೆರೆಹೊರೆಯವರ ಸಹಾಯದಿಂದ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮಹಿಳೆ ಬದುಕುಳಿದಿದ್ದಾಳೆ.

ಇದೀಗ ಗಂಡನ ಮೇಲೆ ಮಹಿಳೆ ದೂರು ನೀಡಿದ್ದು, ಕೊಲೆ ಯತ್ನ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ : ಉತ್ತರಾಖಂಡ ಮಾಜಿ ಸಿಎಂ ಕಣಕ್ಕೆ