Publish Date: Mon, 20 Mar 2023 (18:01 IST)
Updated Date: Mon, 20 Mar 2023 (18:05 IST)
ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94(ಸಿ), 94(ಸಿಸಿ) ಯೋಜನೆಯಡಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ 5,000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದಾರೆ. ಇಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಹಕ್ಕು ಪತ್ರ ವಿತರಿಸಲಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ R. ಅಶೋಕ್, ಸಿಎಂ ಬೊಮ್ಮಾಯಿಯವರನ್ನ ಹಾಡಿ ಹೊಗಳಿದ್ದಾರೆ. ಇದು ಕಾಂಪ್ಲೆಕ್ಸ್ ಕಟ್ಟುವ ಕಾರ್ಯಕ್ರಮವಲ್ಲ, ಬಡವರ ಕಾರ್ಯಕ್ರಮ. ಬಡವರಿಗೆ ಸೈಟ್ ಕೊಡುವ ಕಾರ್ಯಕ್ರಮ ಎಂದ ತಕ್ಷಣ ಸಿಎಂ ನಾನು ಬರುತ್ತೇನೆ ಎಂದರು. ನಾನು ತುಂಬಾ ಸಿಎಂಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ ಬೊಮ್ಮಾಯಿಯವರಷ್ಟು ಸಿಂಪಲ್ ಸಿಎಂ ಅನ್ನ ನಾನು ಎಲ್ಲಿಯೂ ನೋಡಿಲ್ಲ. ಕಾಮನ್‌ಮ್ಯಾನ್ ಸಿಎಂ ಎಂದು ಹೊಗಳಿದರು. ನನಗೆ ಕೆಲಸ ಮಾಡಲು ಪೂರ್ತಿ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಬಡವರಿಗೋಸ್ಕರ ಏನು ಕೆಲಸ ಆದರೂ ಮಾಡು, ಅದಕ್ಕೆ ಸಹಿ ಮಾಡಲು ನಾನು ತಯಾರಿದ್ದೇನೆ ಎಂದಿದ್ದಾರೆ ಎಂದು ಅಶೋಕ್ ತಿಳಿಸಿದ್ರು.