Publish Date: Mon, 20 Mar 2023 (17:44 IST)
Updated Date: Mon, 20 Mar 2023 (17:53 IST)
ಚುನಾವಣೆ ಘೋಷಣೆಗೂ ಮುನ್ನವೇ BJP, ಕಾಂಗ್ರೆಸ್ ಕಾರ್ಯಕರ್ತರು, ಟಿಕೆಟ್ ಆಕಾಂಕ್ಷಿಗಳು ಪ್ರಚಾರ ಆರಂಭಿಸಿದ್ದಾರೆ.. ಹೀಗೆ ಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕಿ ಖನೀಜ್ ಫಾತೀಮಾ ಪ್ರಚಾರಕ್ಕೆ ತೆರಳಿದ್ದ ವೇಳೆ, ಶಾಸಕಿ ಖನೀಫ್ ಫಾತೀಮಾ ಬೆಂಬಲಿಗರು ಮತ್ತು BJP ಟಿಕೆಟ್ ಆಕಾಂಕ್ಷಿ ಚಂದು ಪಾಟೀಲ್ ಬೆಂಬಲಿಗರ ನಡುವೆ ವಾಗ್ಯುದ್ಧ ನಡೆದಿದೆ. ಕಲಬುರಗಿ ನಗರದ ಫಿಲ್ಟರ್ ಬೆಡ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.. ಶಾಸಕಿ ಖನೀಜ್ ಫಾತಿಮಾ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಿ, ಮತಯಾಚನೆಗೆ ತೊಡಗಿದ್ದರು..ಇದು ಗ್ಯಾರಂಟಿ ಅಲ್ಲದ ಕಾರ್ಡ್, ಭರವಸೆ ಈಡೇರಿಕೆಗೆ ದಿನಾಂಕ ನಿಗದಿಯಿಲ್ಲ ಎಂದು BJP ಕಾರ್ಯಕರ್ತರು ತಕರಾರು ತೆಗೆದಿದ್ದರು.. ನಂತರ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದು, ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.. ಶಾಸಕಿ ಖನೀಜ್ ಫಾತಿಮಾ ಪುತ್ರ ಫರ್ಜುಲ್ ಇಸ್ಲಾಂ ಮತ್ತು BJP ಕಾರ್ಯಕರ್ತರ ನಡುವೆ ತೀವ್ರ ಜಟಾಪಟಿ ನಡೆಯಿತು. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಗಲಾಟೆ ಶಾಂತಗೊಂಡಿದೆ