Publish Date: Mon, 20 Mar 2023 (17:27 IST)
Updated Date: Mon, 20 Mar 2023 (17:32 IST)
ಶಿವಮೊಗ್ಗದಲ್ಲಿ ಮಾಜಿ ಸಚಿವ K.S.ಈಶ್ವರಪ್ಪ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಈಶ್ವರಪ್ಪ, ಲೌಡ್ ಸ್ಪೀಕರ್ನಲ್ಲಿ ಆಜಾನ್ ಹಾಕಲಾಗುತ್ತದೆ.. ಅಲ್ಲಾನೇನು ಕಿವುಡನೇ, ಜೋರಾಗಿ ಆಜಾನ್ ಹೇಳದಿದ್ದರೆ ಅಲ್ಲಾಹ್ನಿಗೆ ಕಿವಿ ಕೇಳಿಸುವುದಿಲ್ಲವೇ ಎಂದು ಪ್ರಶ್ನಿಸಿದ್ರು. ಇದಕ್ಕೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು.. ಇದಕ್ಕೆ ಸಮಾಜಾಯಿಷಿ ನೀಡಿರುವ ಈಶ್ವರಪ್ಪ, ನಾನು ಅಲ್ಲಾಹ್.. ಕಿವುಡಾ ಅಂತಾ ಹೇಳಿಲ್ಲ. ನೀವು ನಾಲ್ಕು, ನಾಲ್ಕು ಹಾರ್ನ್ ಹಾಕ್ಕೊಂಡು ಕೂಗ್ತಿರಲ್ಲ, ಅಲ್ಲಾಹ್ ಕಿವುಡಾನಾ ಅಂತಾ ಕೇಳಿದ್ದು.. ಅಲ್ಲಾಹ್ನಿಗೆ ನಾನು ಬೈದಿಲ್ಲ ಎಂದು ಹೇಳಿದ್ದಾರೆ.