Publish Date: Mon, 20 Mar 2023 (17:53 IST)
Updated Date: Mon, 20 Mar 2023 (17:57 IST)
ಅದಾನಿ ಗ್ರೂಪ್ ವಿವಾದದ ಕುರಿತು ತನಿಖೆಗೆ ಆಗ್ರಹಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗಿದ ನಂತರ ಲೋಕಸಭೆಯನ್ನು ಇಂದು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಪ್ರತಿಪಕ್ಷಗಳ ಸಂಸದರು, ಕಾರ್ಪೊರೇಟ್ ದೈತ್ಯ ಅದಾನಿ ಸಮೂಹದ ವಂಚನೆಗಳ ವಿರುದ್ಧ ತನಿಖೆಗೆ ಒತ್ತಾಯಿಸಿ, ಪ್ರತಿಭಟಿಸಿದರು. ಕಲಾಪದಲ್ಲಿ ಭಾಗಿಯಾಗುವಂತೆ ಮಾಡಿದ ಮನವಿಗೆ ಪ್ರತಿಭಟನಾನಿರತ ಸಂಸದರು ಕಿವಿಗೊಡದಿದ್ದಾಗ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.