Select Your Language

Notifications

webdunia
webdunia
webdunia
webdunia

ಹಾಸನದಲ್ಲಿ ಆಣೆ-ಪ್ರಮಾಣ ಪಾಲಿಟಿಕ್ಸ್​​

Oath-Oath Politics in Hassan
ಮಾಜಿ ಸಚಿವ H.D. ರೇವಣ್ಣ ಮತ್ತು ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ JDS ತೊರೆಯುವ ಮೊದಲು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿತ್ತು. ಈ ಆಡಿಯೋ ಸಂಬಂಧ ಪ್ರತಿಕ್ರಿಯೆ ನೀಡಿದ H.D. ರೇವಣ್ಣ‌, JDS ಶಾಸಕ ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಡಿಯೋದಲ್ಲಿ ಹೇಳಿರುವುದು ಸತ್ಯ ಅಲ್ಲ ಎಂದು ಶಾಸಕರು ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡಲಿ ಎಂದು ಹಾಸನದಲ್ಲಿ ಸವಾಲು ಹಾಕಿದ್ದಾರೆ. ನಿನ್ನೆ ಅರಸೀಕೆರೆಯಲ್ಲಿ ಪಕ್ಷದ ಮುಖಂಡರ ಸಭೆ ಬಳಿಕ ಮಾತನಾಡಿದ ರೇವಣ್ಣ, ಆ ಹುಡುಗ ಆಡಿಯೋ ರೆಕಾರ್ಡ್ ಮಾಡಿಕೊಂಡಿರೋದು ನನಗೆ ಗೊತ್ತಿಲ್ಲ. ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರೋದು ಸತ್ಯ ಅಲ್ಲ ಅಂಥ ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡಲಿ. ರಾಗಿ ಕಳ್ಳ ಅಂದ ಕೂಡಲೇ ಸತ್ಯ ಮಾಡಲಿಲ್ವಾ. ಕಳೆದ ಒಂದು ವರ್ಷದಿಂದ ಇದು ನಡೀತಿದೆ. ಕುರುಬರು, ಲಿಂಗಾಯತರು, ಒಕ್ಕಲಿಗರು ನನಗೆ ಓಟು ಹಾಕಲ್ಲ ಎಂದು ಆ ಆಡಿಯೋದಲ್ಲೇ ಹೇಳಿದ್ದಾರೆ. ನಾನೇನಾದರು ಒಂದು ಪದ ಎಡಿಟ್ ಮಾಡಿರೋದನ್ನ ತೋರ್ಸಿದ್ರೆ ಆ ಧರ್ಮಸ್ಥಳದ ಮಂಜುನಾಥ ನನ್ನ‌ನ್ನು ನೋಡಿಕೊಳ್ಳಲಿ. ಇಲ್ಲವಾದರೆ ಆ ದೇವರು ಅವರನ್ನ ನೋಡಿಕೊಳ್ಳಲಿ ಎಂದರು

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಾಸಭೆ ಕಲಾಪ ಮುಂದೂಡಿಕೆ