Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಶಾಸಕನಿಗೆ ದನ ತಿನ್ನುವವ ಎಂದ ಬಿಜೆಪಿ ಕಾರ್ಯದರ್ಶಿ!

ಕಾಂಗ್ರೆಸ್ ಶಾಸಕನಿಗೆ ದನ ತಿನ್ನುವವ ಎಂದ ಬಿಜೆಪಿ ಕಾರ್ಯದರ್ಶಿ!
ಭೂಪಾಲ್ , ಭಾನುವಾರ, 24 ಫೆಬ್ರವರಿ 2019 (15:15 IST)
ದನದ ಮಾಂಸ ತಿನ್ನುವವನೊಬ್ಬ ರಾಷ್ಟ್ರೀಯವಾದಿ ಬಿಜೆಪಿ ಸರ್ಕಾರವನ್ನು ಸೋಲಿಸಿದನೆಂದರೆ ಅದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗೀಯ ನೀಡಿರುವ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ.  ಕಾಂಗ್ರೆಸ್ ಆರಿಫ್ ಮಸೂದ್ ಎಂಬುವರು ಬಿಜೆಪಿಯ ಎಸ್.ಎನ್ ಸಿಂಗ್ ಅವರನ್ನು ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಪರಭಾವಗೊಳಿಸಿದ್ದರು. ಆ ಹಿನ್ನೆಲೆಯಲ್ಲಿ ಕೈಲಾಸ್ ಹೀಗೆ ಹೇಳಿಕೆ ನೀಡಿದ್ದಾರೆ.

ಗೋ ವಧೆಯನ್ನು ತಡೆಯುವ ರಾಷ್ಟ್ರೀಯ ಸರ್ಕಾರವೊಂದು ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿತ್ತು. ಆದರೂ ದನದ ಮಾಂಸ ತಿನ್ನುವವನೊಬ್ಬ ಚುನಾವಣೆಯಲ್ಲಿ ಗೆಲ್ಲುತ್ತಾನೆಂದರೆ ಅದು ಪಕ್ಷದ ನಾವೆಲ್ಲಾ ಕಾರ್ಯಕರ್ತರಿಗೆ ನಾಚಿಕೆಯಾಗಬೇಕು ಎಂದವರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು. ಅವರ ಹೇಳಿಕೆ ಈಗ ವ್ಯಾಪಕ ಪರ ವಿರೋಧ ಟೀಕೆಗಳಿಗೆ ಗುರಿಯಾಗುತ್ತಿದೆ.
 


Share this Story:

Follow Webdunia kannada

ಮುಂದಿನ ಸುದ್ದಿ

ವೈಮಾನಿಕ ಏರೋ ಇಂಡಿಯಾಗೆ ತೆರೆ