Publish Date: Wed, 20 Feb 2019 (16:28 IST)
Updated Date: Wed, 20 Feb 2019 (16:30 IST)
ದಿನೇಶ್ ಗುಂಡುರಾವ್ ಹೇಳಿಕೆಗೆ ಅಥಣಿ ಶಾಸಕ ತಿರುಗೇಟು ನೀಡಿದ್ದಾರೆ.
ಪಕ್ಷ ತೊರೆಯುವವರು ಬೆನ್ನಿಗೆ ಚೂರಿ ಹಾಕಬಾರದು. ಸರ್ಕಾರದ ಸ್ಥಿತಿ ಡೋಲಾಯಮಾನ ಆಗುವ ಹಾಗೆ ನಡೆದುಕೊಳ್ಳಬಾರದು ಎಂದಿದ್ದ ದಿನೇಶ್ ಗುಂಡುರಾವ್ ಹೇಳಿಕೆಗೆ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ತಿರುಗೇಟು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಶಾಸಕ ಮಹೇಶ್ ಕುಮಠಳ್ಳಿ ಹೇಳಿಕೆ ನೀಡಿದ್ದು, ಬೆನ್ನಿಗೆ ಚೂರಿ ಯಾರೂ ಹಾಕುತ್ತಿಲ್ಲ ಎಲ್ಲರೂ ಪಕ್ಷದಲ್ಲಿ ಇದ್ದೇವೆ. ನಮ್ಮ ಕೆಲಸಗಳಿಗಾಗಿ ಹಠ ಮಾಡಿದ್ದೇವೆ. ನನ್ನ ಗೆಲುವಿಗೆ ಕ್ಷೇತ್ರದ ಸಮಸ್ತ ನಾಗರೀಕರು, ಕಾಂಗ್ರೆಸ್ ಮುಖಂಡರು ಕಾರಣ ಎಂದಿದ್ದಾರೆ.
ಅಭಿವೃದ್ಧಿ ಕೆಲಸ ಮಾಡಲು ಸಹಕರಿಸಿ ಎಂದು ಮಹೇಶ್ ಕುಮಠಳ್ಳಿ ಹೇಳಿದರು.
ಈ ಮೊದಲು ರಮೇಶ್ ಜಾರಕಿಹೊಳಿ ಜೊತೆ ಮುಂಬೈಗೆ ತೆರಳಿದ್ದ ವೇಳೆ ನನ್ನ ಗೆಲುವಿಗೆ ರಮೇಶ್ ಜಾರಕಿಹೊಳಿ ಕಾರಣ. ಅದಕ್ಕಾಗಿ ಅವರೊಂದಿಗೆ ಇದ್ದೇನೆ ಎಂದು ಈ ಹಿಂದೆ ಮಹೇಶ್ ಕುಮಠಳ್ಳಿ ಹೇಳಿದ್ದರು.
ರೈತ ಮುಖಂಡನ ಜೊತೆಗಿನ ಪೋನ್ ಸಂಭಾಷಣೆಯ ಆಡಿಯೋ ವೈರಲ್ ಆದ ಬಳಿಕ ಮುಜಗುರಕ್ಕೆ ಒಳಗಾಗಿದ್ದ ಮಹೇಶ್ ಕುಮಠಳ್ಳಿ, ಹೇಬಿಯಸ್ ಕಾರ್ಪಸ್ ಹಿನ್ನೆಲೆಯಲ್ಲಿ ಹೈಕೋರ್ಟ್ ಗೆ ಹಾಜರಾಗಲು ಆಗಮಿಸಿದ್ದಾರೆ.