Publish Date: Fri, 22 Feb 2019 (15:34 IST)
Updated Date: Fri, 22 Feb 2019 (15:36 IST)
ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸಚಿವ ಜಿ.ಟಿ. ದೇವೇಗೌಡ ಗರಂ ಆಗಿರುವುದು ಚರ್ಚೆಗೆ ಕಾರಣವಾಗಿದೆ.
ಮೈಸೂರಿನಲ್ಲಿ ಘಟನೆ ಬಗ್ಗೆ ಸಚಿವ ಜಿಟಿಡಿ ಸ್ಪಷ್ಟನೆ ನೀಡಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಚಾಲನೆ ವೇಳೆ ಗರಂ ಆಗಿದ್ದೆ. ನಾನು ಅಲ್ಲಿಗೆ ಹತ್ತಕ್ಕೂ ಹೆಚ್ಚು ಬಾರಿ ಹೋಗಿದ್ದೇನೆ. ಅಭಿವೃದ್ಧಿ ಆಗಬೇಕೆಂದೆ ನಾನು ಅಲ್ಲಿಗೆ ಶಂಕು ಸ್ಥಾಪನೆಗೆ ಹೋಗಿದ್ದೆ. ಅದು ಮುಡಾ ವ್ಯಾಪ್ತಿಗೆ ಬರುವ ಹಿನ್ನಲೆಯಲ್ಲಿ ನಾವು ಅದನ್ನ ಅಭಿವೃದ್ಧಿ ಪಡಿಸುತ್ತಿದ್ದೇವೆ.
ಆದರೆ ಡ್ರೈನೆಜ್ ಇಲ್ಲ ಸಮಸ್ಯೆ ಆಲಿಸಿ ಎಂದು ಬಂದಿದ್ದರು. ಸಮಸ್ಯೆಗೆ ಮುಕ್ತಿ ಕೊಡಲು ಹೋದಾಗ ಈ ಮಾತುಗಳು ಬೇಕಿರಲಿಲ್ಲ ಎಂದರು. ಮೈಸೂರಿನಲ್ಲಿ ಸಚಿವ ಜಿ.ಟಿ ದೇವೇಗೌಡ ಈ ಹೇಳಿಕೆ ನೀಡಿದ್ದಾರೆ.