Select Your Language

Notifications

webdunia
webdunia
webdunia
Sunday, 13 April 2025
webdunia

ಹೆರಿಗೆ ಆಸ್ಪತ್ರೆಯಲ್ಲಾದ ಅವಘಡ ಎಂಥದ್ದು ಗೊತ್ತಾ?

ಹೆರಿಗೆ
ಚಿಕ್ಕಬಳ್ಳಾಪುರ , ಶುಕ್ರವಾರ, 22 ಫೆಬ್ರವರಿ 2019 (15:00 IST)
ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅವಘಡ ಸಂಭವಿಸಿದೆ.

ಹೆರಿಗೆ ಮತ್ತು ಮಕ್ಕಳ ಆ್ಪಸ್ಪತ್ರೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ. ಸ್ವಲ್ಪದರಲ್ಲೆ ಭಾರಿ ಅನಾಹುತ ತಪ್ಪಿದಂತಾಗಿದೆ.
ಹೊಸ ಆಸ್ಪತ್ರೆಯಲ್ಲಿ ಪ್ಯಾನೆಲ್ ಬೋರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗುತ್ತಿಗೆದಾರನ ಬೇಜವಾಬ್ದಾರಿ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಹೊಸ ಆಸ್ಪತ್ರೆಯಲ್ಲಿ ಪೂರ್ತಿ ಹೊಗೆಮಯವಾಗಿತ್ತು. ಹೊಗೆಯನ್ನು ಕಂಡ  ರೋಗಿಗಳು ಭಯಭೀತರಾಗಿದ್ದರು. ಮರಳಿನಿಂದ ಬೆಂಕಿಯನ್ನು ನಂದಿಸುವಲ್ಲಿ ವೈದ್ಯರು ಹರಸಾಹಸ  ನಡೆಸಿದರು. ತಡ  ರಾತ್ರಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ರೋಗಿಗಳು ಆಡಳಿತ ವ್ಯವಸ್ಥೆ ವಿರುದ್ಧ ಕಿಡಿಕಾರಿದರು.

ಹೊಸ ಆಸ್ಪತ್ರೆಯಲ್ಲಿ ವೈರಿಂಗ್ ಸರಿಯಾಗಿ ಮಾಡಿಲ್ಲವೆಂಬ ಶಂಕೆ  ವ್ಯಕ್ತವಾಗುತ್ತಿದೆ. ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿರುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ‌ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭಾ ಚುನಾವಣೆಗೆ ಜೆಡಿಎಸ್ ಮಾಡ್ತಿರೋದೇನು?