Publish Date: Thu, 21 Feb 2019 (15:44 IST)
Updated Date: Thu, 21 Feb 2019 (15:45 IST)
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಸಚಿವ ಜಿ.ಟಿ. ದೇವೇಗೌಡ ಗರಂ ಆದ ಘಟನೆ ನಡೆದಿದೆ.
ಚಾಮುಂಡೇಶ್ವರಿ ಕ್ಷೇತ್ರದ ಕೆ. ಸಾಲುಂಡಿ ಗ್ರಾಮದಲ್ಲಿ ವಾಗ್ವಾದ ನಡೆದಿದೆ. ಗ್ರಾಮದೊಳಗೆ ದುರ್ವಾಸನೆ ಬರ್ತಿದೆ, ಬಂದು ಪರಿಶೀಲಿಸಿ ಅಂತಾ ಗ್ರಾಮಸ್ಥರು ಒತ್ತಾಯ ಮಾಡಿದರು.
ನೀವ್ ನಂಗೆ ಓಟ್ ಹಾಕಿದ್ದೀರಾ..ನೀವೆಲ್ಲಾ ಸಿದ್ದರಾಮಯ್ಯ ಗೆ ಓಟ್ ಹಾಕಿರೋದು.. ನಾನ್ಯಾಕೆ ಬಂದ್ ನೋಡಲಿ ಅಂತ ಸಚಿವ ಗರಂ ಆದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬೀರಿಹುಂಡಿ ಬಸವಣ್ಣ ಮತ್ತು ಸಿದ್ದು ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ಆಗ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ಸುಧಾರಿಸಿದರು. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ಸಂದರ್ಭ ನಡೆದ ಘಟನೆ ಇದಾಗಿದೆ.