Select Your Language

Notifications

webdunia
webdunia
webdunia
webdunia

ಟಿವಿ, ಪೇಪರ್ ನೋಡೋರ ತಲೆ ದಿನ ಹಾಳಾಗುತ್ತದೆ - ಸಚಿವ ಅನಂತ್ ಕುಮಾರ್ ಹೆಗಡೆ

ಟಿವಿ, ಪೇಪರ್ ನೋಡೋರ ತಲೆ ದಿನ ಹಾಳಾಗುತ್ತದೆ - ಸಚಿವ ಅನಂತ್ ಕುಮಾರ್ ಹೆಗಡೆ
ಕಾರವಾರ , ಬುಧವಾರ, 20 ಫೆಬ್ರವರಿ 2019 (10:07 IST)
ಕಾರವಾರ : ಯಾರೂ ಟಿವಿ, ಪೇಪರ್ ನೋಡ್ತಾರೋ ಅವರ  ತಲೆ ದಿನ ಹಾಳಾಗುತ್ತದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ.


ಅಂಕೋಲ ತಾಲೂಕಿನ ಅಲಗೆರೆಯಲ್ಲಿ ತಮ್ಮ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಪತ್ರಿಕೆಯಲ್ಲಿ, ಟಿ.ವಿಯಲ್ಲಿ ನಮ್ಮ ಪರವಾಗಿ ಬರೆಯೋದಿಲ್ಲ. ಅವರು ಬೇಕಾದ್ದು ಬರೆದುಕೊಂಡು ಹೋಗಲಿ ನೀವ್ಯಾರೂ ತಲೆಕೆಡಿಸಿಕೊಳ್ಳಬೇಡಿ. ಕಳೆದ ಹತ್ತು ವರ್ಷದಿಂದ ನಾನು ಟಿ.ವಿ ನೋಡುತ್ತಿಲ್ಲ, ಪೇಪರ್ ಓದುತ್ತಿಲ್ಲ ಅದಕ್ಕೋಸ್ಕರ ನನ್ನ ತಲೆ ಸರಿ ಇದೆ’ ಎಂದು ಹೇಳಿದ್ದಾರೆ.


ತಲೆ ಸರಿ ಇರಬೇಕು, ಡಯಾಬಿಟಿಕ್ ಸರಿ ಇರಬೇಕು, ಬಿಪಿ ಸರಿ ಇರಬೇಕು ಎಂದರೆ ಟಿ.ವಿ ನೋಡಬೇಡಿ ಪೇಪರ್ ಓದಬೇಡಿ. ನಿಮಗೆ ಕುತೂಹಲ, ಟೆನ್ಷನ್, ಅದು ಹಂಗಾಗುತ್ತೆ, ಹಿಂಗಾಗುತ್ತೆ, ಮಹಾಘಟಬಂದನ್ ಹಾಗಾದ್ರೆ ಮಹಾ ಸ್ಫೋಟ, ಎಂತದ್ದೂ ಆಗೋದಿಲ್ಲ ಆಗೋದು ಘಟಸ್ಫೋಟವೇ. ಬೇರೆ ಎಂತದ್ದೂ ಆಗೋದಿಲ್ಲ ತಲೆಕೆಡಿಸಿಕೊಳ್ಳಬೇಡಿ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿರುದ್ಯೋಗಿಗಳಿಗೊಂದು ಸಿಹಿಸುದ್ದಿ; ರೈಲ್ವೆ ಇಲಾಖೆಯ 1,30,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ