Publish Date: Wed, 20 Feb 2019 (15:27 IST)
Updated Date: Wed, 20 Feb 2019 (15:29 IST)
ನಾನು ಜೀವನದಲ್ಲಿ ಮತ್ತೆ ಕಾಂಗ್ರೆಸ್ ಬಿಟ್ಟು ತಪ್ಪು ಮಾಡಲ್ಲ. ಹೀಗಂತ ಮಾಜಿ ಶಾಸಕ ಹೇಳಿದ್ದು, ಇದೀಗ ಕೈಪಾಳೆಯಕ್ಕೆ ಮತ್ತೆ ಮರಳಿದ್ದಾರೆ. ಕೇಂದ್ರ ಸಚಿವರನ್ನು ಸೋಲಿಸುವ ಪಣ ತೊಟ್ಟಿದ್ದಾರೆ.
ಮಾಜಿ ಶಾಸಕ ಜೆ.ಡಿ ನಾಯ್ಕ ಹೇಳಿಕೆ ನೀಡಿದ್ದು, ನಾನು ಜೀವನದಲ್ಲಿ ಮತ್ತೆ ಕಾಂಗ್ರೆಸ್ ಬಿಟ್ಟು ತಪ್ಪು ಮಾಡಲ್ಲ.
2018 ರಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು 6 ತಿಂಗಳು ಬಿಜೆಪಿಯಲ್ಲಿದ್ದೆ. ಆದ್ರೆ ನನಗೆ ಅಲ್ಲಿರಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಹೇಳಿದ ಕೆಲಸ ಮಾಡಿಕೊಂಡು ಇರ್ತೇನೆ ಎಂದರು.
ನಾನು 2018 ರ ಚುನಾವಣೆಯಲ್ಲಿ ಸ್ಪರ್ಧಿಸಲು ಆಗಲಿಲ್ಲ ಎಂದು ಬಿಜೆಪಿಯಿಂದ ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಗೆ ಪ್ರಯತ್ನ ಮಾಡಿದ್ದ ಜೆ.ಡಿ ನಾಯ್ಕ್ ಹೇಳಿದ್ದಾರೆ.
ಜೆ.ಡಿ ನಾಯ್ಕ್ ಗೆ ಸಂಸದ ಅನಂತ್ ಕುಮಾರ್ ಹೆಗಡೆ ಟಿಕೆಟ್ ತಪ್ಪಿಸಿದ್ದರು ಎನ್ನಲಾಗಿದೆ. ಆಗ ಸುನೀಲ್ ನಾಯ್ಕ್ ಗೆ ಟಿಕೆಟ್ ಕೊಡಿಸಿದ್ರು. ಸುನೀಲ್ ನಾಯ್ಕ ಎಂಟ್ರಿಯಿಂದ ಬಿಜೆಪಿಯಲ್ಲಿ ಜೆಡಿ ನಾಯ್ಕ್ ಗೆ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಅನಂತ್ ಕುಮಾರ್ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡಲು ಕಾಂಗ್ರೆಸ್ ಗೆ ಮರಳಿದ್ದೇನೆ ಎಂದರು.