Publish Date: Wed, 20 Feb 2019 (15:12 IST)
Updated Date: Wed, 20 Feb 2019 (15:14 IST)
ಮೈತ್ರಿ ಸರಕಾರದ ಪಕ್ಷಗಳು ಜತೆಯಾಗಿ ಲೋಕಸಭೆ ಚುನಾವಣೆ ಎದುರಿಸುತ್ತಿವೆ. ಆದರೆ ಟಿಕೆಟ್ ಹಂಚಿಕೆ ಮಾತ್ರ ಕಗ್ಗಂಟಾಗುತ್ತಿದೆ.
ಸೀಟು ಹಂಚಿಕೆ ಕುರಿತು ದಿನೇಶ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಾತ್ರಿ ಅಥವಾ ನಾಳೆ ನಾನು ದೇವೇಗೌಡರನ್ನ ಭೇಟಿ ಮಾಡ್ತೇನೆ ಎಂದರು.
ಇದರಲ್ಲಿ ಯಾರೂ ಬೆಗ್ಗರ್ಸ್ ಅಲ್ಲ. ಇಂದು ನಾನು ಸಿಎಂ ಜೊತೆ ಮಾತಾಡಿದ್ದೇನೆ . ಯಾವುದೇ ಗೊಂದಲವಿಲ್ಲ. ನನ್ನ ಜೊತೆ ಸೌಜನ್ಯದಿಂದಲೇ, ತಾಳ್ಮೆಯಿಂದಲೇ ಸಿಎಂ ಮಾತಾಡಿದ್ದಾರೆ ಎಂದರು.
ಪತ್ರಕರ್ತರ ತೀಕ್ಷ್ಣ ಪ್ರಶ್ನೆಗಳು ಬಂದಾಗ ಆ ರೀತಿ ಸಿಎಂ ಹೇಳಿರಬಹುದು ಎಂದ ಅವರು, ಹೇಳಿಕೆಗಳನ್ನೇ ಆಧಾರವಾಗಿಟ್ಟುಕೊಂಡು ರಾಜಕಾರಣ ಮಾಡಲಿಕ್ಕೆ ಬರಲ್ಲ. ಸರ್ಕಾರ ಉರುಳಿಸೋ ತಂತ್ರಗಾರಿಕೆ ಬಂದಾಗ ನಾವು ಒಟ್ಟಾಗಿದ್ದು ಸರ್ಕಾರ ಉಳಿಸಿಕೊಳ್ಳಲಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.