Select Your Language

Notifications

webdunia
webdunia
webdunia
webdunia

ಮಾನವೀಯತೆ ಮೆರೆದ ಸಚಿವ!

ಅಪಘಾತ
ತುಮಕೂರಿನಲ್ಲಿ ಮಾಜಿ ಸಚಿವ ಸಿ ಟಿ ರವಿ ಅವರ ಕಾರು ಅಪಘಾತವಾಗಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದರು. ಶಾಸಕರ ಈ ಕಾರ್ಯಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗ್ತಿದೆ. ಆದರೆ ಇತ್ತ ಸಚಿವರೊಬ್ಬರ ಮಾನವೀಯತೆ ಗಮನ ಸೆಳೆದಿದೆ.  

ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್, ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಸಚಿವ ರಾಜಶೇಖರ್ ಪಾಟೀಲ್ ಬೀದರ್ ನ ಹಳ್ಳಿಖೇಡ ಬಿ ಯಿಂದ ಹುಮ್ನಾಬಾದ್ ಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ವೊಂದಕ್ಕೆ ವಾಹನ ಗುದ್ದಿ ಹೋಗಿತ್ತು. ಇದರಿಂದ ಬೈಕ್ ಸವಾರಿಬ್ಬರು ರಸ್ತೆಯಲ್ಲಿ ಬಿದ್ದು ಒದ್ದಾಡುತಿದ್ದರು.

ಇದನ್ನು ಗಮನಿಸಿದ ಸಚಿವ ರಾಜಶೇಖರ್ ಪಾಟೀಲ್, ಗಾಯಾಳುಗಳನ್ನು ಆಟೋ ತರಿಸಿ ಅದರ ಮೂಲಕ ಹಳ್ಳಿಖೇಡ ಬಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಅಲ್ಲಿ ಒಬ್ಬಾತನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ, ಮತ್ತೊಬ್ಬ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಸಚಿವರ ಈ ಮಾನವೀಯತೆಯನ್ನ ಕಂಡು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಜಾತ್ರೆಯಲ್ಲಿ ಹಾರಿಸಿದ ಗುಂಡಿಗೆ ವ್ಯಕ್ತಿ ಸಾವು!