Select Your Language

Notifications

webdunia
webdunia
webdunia
Monday, 14 April 2025
webdunia

ಗೌರವಯುತವಾಗಿ ನಡೆಸಿ ಎಂದ ಸಿಎಂ!

ಬೆಗ್ಗರ್ಸ
ಬೆಂಗಳೂರು , ಗುರುವಾರ, 21 ಫೆಬ್ರವರಿ 2019 (17:33 IST)
ಮೈತ್ರಿ ಸರಕಾರ ಉತ್ತಮ ಆಡಳಿತ ನೀಡುತ್ತಿದೆ. ನಾನು ಬೆಗ್ಗರ್ಸ್ ಅಂತಾ ಹೇಳಿದ್ದು ನಿಜ.  ಆದರೆ ನಮ್ಮನ್ನು ಗೌರವಯುತವಾಗಿ ನಡೆಸಿ ಅಂತ ಮನವಿ ಮಾಡಿದ್ದೆ ಅಷ್ಟೆ ಎಂದು ಸಿಎಂ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬೆಗ್ಗರ್ಸ್ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಾನು ಯಾರನ್ನೂ ಬೊಟ್ಟು ಮಾಡಿ ಆ ಪದ ಹೇಳಿಲ್ಲ. ಸಮನ್ವಯ ಸಾಧಿಸಿಕೊಂಡು ಹೋಗಬೇಕೆಂದು ಮನವಿ ಮಾಡಿದ್ದೆ.  ಆದರೆ ನನ್ನ ಹೇಳಿಕೆಯನ್ನು ಸಂಪೂರ್ಣವಾಗಿ ಪ್ರಸಾರ ಮಾಡಿಲ್ಲ. ನೀವು ಬೆಗ್ಗರ್ಸ್ ಎಂದು ಹೇಳಿದನ್ನಷ್ಟೇ ಪ್ರಸಾರ ಮಾಡಿ, ಮುಂದಿನ ಹೇಳಿಕೆಯನ್ನು ಕಟ್‌ ಮಾಡಿದ್ದೀರಿ ಎಂದು ಮಾಧ್ಯಮದವರ ಮೇಲೆ ತಿರುಗೇಟು ನೀಡಿದರು. 

ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ಯಾವುದೇ ಸಮಸ್ಯೆ ಇಲ್ಲದೇ ಬಗೆಹರಿಯಲಿದೆ. ‌ಇನ್ನು ಮೂರು ನಾಲ್ಕು ದಿನಗಳಲ್ಲಿ ಎಲ್ಲವೂ ಬಗೆಹರಿಯಲಿದ್ದು, ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ ಗ್ಲಾಸ್ ಒಡೆದು ದೋಚಿದ್ದು ಲಕ್ಷ ಲಕ್ಷ ಹಣ!