ಕಾರ್ ವೊಂದನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಕೊನೆಗೆ ಕಾರಿನ ಗ್ಲಾಸ್ ಒಡೆದು ಲಕ್ಷ ಲಕ್ಷ ಹಣ ಲಪಟಾಯಿಸಿರುವ ಘಟನೆ ನಡೆದಿದೆ.
ಬೀಗರ ಊಟಕ್ಕೆಂದು ಹೊರಟ್ಟಿದ್ದವರನ್ನು ಹಿಂಬಾಲಿಸಿ ಕಾರ್ ಗ್ಲಾಸ್ ಒಡೆದು 8.7 ಲಕ್ಷ ಹಣ ದೋಚಿ ಪರಾರಿಯಾದ ಘಟನೆ ನೆಲಮಂಗಲದ ಕಡಬಗೆರೆ ಬಳಿ ನಡೆದಿದೆ.
ತಾವರೆಕೆರೆಯ ಶ್ರೀನಿವಾಸ ರೆಡ್ಡಿ ಅವರು ಬೀಗರ ಔತಣಕೂಟಕ್ಕೆ ಕಡಬಗೆರೆಗೆ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಶ್ರೀನಿವಾಸ ರೆಡ್ಡಿ ಅವರು ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿದ್ದನ್ನ ಗಮನಿಸಿ, ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಸ್ಕಾರ್ಪಿಯೋ ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿದ್ದ 8.7 ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.
ಬೈಕ್ನಲ್ಲಿ ಇಬ್ಬರು ದುಷ್ಕರ್ಮಿಗಳು ಹಾಡುಹಗಲೇ ಸಂಚು ರೂಪಿಸಿ ನಡೆಸಿರುವ ಕೃತ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿರುವ ಮಾದನಾಯಕನಹಳ್ಳಿ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!