Select Your Language

Notifications

webdunia
webdunia
webdunia
webdunia

ಆರ್ ಟಿ ಓ ಕಚೇರಿ ಮೇಲೆ ಎಸಿಬಿ ದಾಳಿ!

webdunia
ಚಾಮರಾಜನಗರ , ಬುಧವಾರ, 20 ಫೆಬ್ರವರಿ 2019 (11:28 IST)
ಎಸಿಬಿ ಅಧಿಕಾರಿಗಳು ಆರ್ ಟಿ ಓ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಚಾಮರಾಜನಗರ ಆರ್ ಟಿ ಓ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ. ಹೆಚ್ಚುವರಿ ಹಣ ಸಂಗ್ರಹ ಹಿನ್ನೆಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳ ತಂಡ ತನಿಖೆ ನಡೆಸಿದೆ. ಡಿಎಸ್ಪಿ ಮೋಹನ್ ನೇತೃತ್ವದ  ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ಕಡತಗಳ ಪರಿಶೀಲನೆಯಲ್ಲಿ ಎಸಿಬಿ ಅಧಿಕಾರಿಗಳ ತಂಡ ನಿರತವಾಗಿತ್ತು.

ಇಪ್ಪತ್ತಕ್ಕೂ ಹೆಚ್ಚು ಸಾರ್ವಜನಿಕರನ್ನು ಹೊರ ಬಿಡದೆ ವಿಚಾರಣೆಗೆ ಒಳಪಡಿಸಿದ್ದಾರೆ ಎಸಿಬಿ ಅಧಿಕಾರಿಗಳು.
ಸಾರ್ವಜನಿಕರಿಂದ ಆರ್ ಟಿ ಓ ಅಧಿಕಾರಿಗಳಿಗೆ ಹಣ ನೀಡಿರುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಎಸಿಬಿ ಅಧಿಕಾರಿಗಳು, ಸಾರ್ವಜನಿಕರ ದೂರಿನ ಮೇರೆಗೆ ದಾಳಿ ನಡೆಸಿದ್ದಾರೆ.Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಪ್ರತಿಭಟನೆಗೆ ಮುಂದಾದ ರೈತರು. ಕಾರಣವೇನು ಗೊತ್ತಾ?