Select Your Language

Notifications

webdunia
webdunia
webdunia
webdunia

ಮಾವಿನ ಹಣ್ಣಿ ಹಪ್ಪಳ..

ಮಾವಿನ ಹಣ್ಣಿ ಹಪ್ಪಳ..
ಬೆಂಗಳೂರು , ಗುರುವಾರ, 21 ಫೆಬ್ರವರಿ 2019 (15:24 IST)
ಬೇಸಿಗೆಯ ದಿನಗಳು ಮಾವಿನ ಹಣ್ಣಿನ ಹಪ್ಪಳವನ್ನು ಮಾಡಲು ಸರಿಯಾದ ಸಮಯವಾಗಿದೆ. ಇದು ಮಾವಿನ ಸೀಸನ್ ಆಗಿದ್ದು ಯತೇಚ್ಛ ಮಾವಿನ ಹಣ್ಣುಗಳು ಮತ್ತು ಒಣಗಿಸಲು ಬಿಸಿಲು ದೊರೆಯುತ್ತದೆ. ನೀವೇನಾದರೂ ಅಗತ್ಯಕ್ಕಿಂತ ಹೆಚ್ಚಿನ ಹಣ್ಣುಗಳನ್ನು ತಂದಿದ್ದರೆ ಅದು ಹಾಳಾಗುವುದನ್ನು ತಪ್ಪಿಸಲು ಈ ಮಾವಿನ ಹಣ್ಣಿನ ಹಪ್ಪಳವನ್ನು ಮಾಡಿ ಹಲವು ದಿನಗಳವರೆಗೆ ಶೇಖರಿಸಿಡಬಹುದಾಗಿದೆ. ಇದನ್ನು ಮಾಡುವ ವಿಧಾನವೂ ಸಹ ತುಂಬಾ ಸುಲಭವಾಗಿದೆ.
ಬೇಕಾಗುವ ಸಾಮಗ್ರಿಗಳು:
ಮಾವಿನ ಹಣ್ಣು - 1 ಕೆಜಿ
ಸಕ್ಕರೆ - 250 ಗ್ರಾಂ
ಏಲಕ್ಕಿ ಪುಡಿ - 1 ಚಮಚ
ತುಪ್ಪ - 4-5 ಚಮಚ
 
ಮಾಡುವ ವಿಧಾನ:
ಸುಮಾರು ಒಂದು ಕೆಜಿಯಾಗುವಷ್ಟು ಸಿಪ್ಲೆ ತೆಗೆದ ಮಾವಿನ ಹಣ್ಣಿನ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಅದನ್ನು ಒಂದು ಪ್ಯಾನ್‌ನಲ್ಲಿ ಹಾಕಿ ಸಕ್ಕರೆಯನ್ನು ಸೇರಿಸಿ ಒಲೆಯ ಮೇಲಿಟ್ಟು ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಸಣ್ಣ ಉರಿಯಲ್ಲಿ 15-20 ನಿಮಿಷ ಕುದಿಸಿ. ಈ ಮಿಶ್ರಣವನ್ನು ಸತತವಾಗಿ ಮಿಕ್ಸ್ ಮಾಡುತ್ತಲೇ ಇರಿ. ಮಿಶ್ರಣವು ಸ್ವಲ್ಪ ಹೊಂಬಣ್ಣಕ್ಕೆ ಬಂದಾಗ ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿ ಇನ್ನೂ 10-15 ನಿಮಿಷ ಬಿಸಿ ಮಾಡಿ. ಈಗ ಈ ಮಿಶ್ರಣವು ಸ್ವಲ್ಪ ಗಟ್ಟಿಯಾಗಿರುತ್ತದೆ. ಎರಡು ಬಟ್ಟಲುಗಳಿಗೆ ಚೆನ್ನಾಗಿ ತುಪ್ಪವನ್ನು ಸವರಿ ಈ ಮಿಶ್ರಣವನ್ನು ಸಮವಾಗಿ ಹಾಕಿ ಹರಡಿ. 2-3 ದಿನಗಳವರೆಗೆ ಅದನ್ನು ಸೂರ್ಯನ ಬಿಸಿಲಿಗೆ ಇಡಿ. ನಂತರ ಅದನ್ನು ಬಟ್ಟಲಿನಿಂದ ಬೇರ್ಪಡಿಸಿದರೆ ಮಾವಿನ ಹಣ್ಣಿನ ಹಪ್ಪಳ ಸಿದ್ಧವಾಗಿರುತ್ತದೆ. ಇದನ್ನು ನಿಮಗೆ ಬೇಕಾದ ಆಕಾರಕ್ಕೆ ನೀವು ಕತ್ತರಿಸಿಕೊಳ್ಳಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರವೆ ಖಾರದ ಉಂಡೆ