Publish Date: Thu, 21 Feb 2019 (16:42 IST)
Updated Date: Thu, 21 Feb 2019 (16:44 IST)
ಲೋಕಸಭೆ ಚುನಾವಣೆಗೆ ಸೀಟುಗಳ ಹಂಚಿಕೆ ಹಿನ್ನೆಲೆ ಮೈತ್ರಿ ಪಕ್ಷಗಳಲ್ಲಿ ಗೊಂದಲ ಏರ್ಪಟ್ಟಿದೆ. ಈ ನಡುವೆ ಸಿಎಂ ಹೇಳಿರುವ ಬೆಗ್ಗರ್ಸ ಪದ ಬಗ್ಗೆ ಪ್ರತಿಕ್ರಿಯೆಗಳು ಮುಂದುವರಿದಿವೆ. ದೋಸ್ತಿಗಳ ಮಧ್ಯೆ ಬೆಗ್ಗರ್ಸ್ ಪದ ಬಳಕೆ ವಿಚಾರ ಕುರಿತು ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಯಾರಿಗೆ ಯಾರೂ ಬೆಗ್ಗರ್ಸ್ ಅಲ್ಲ. ಕಾಂಗ್ರೆಸ್ ಸಹ ಬೆಗ್ಗರ್ ಅಲ್ಲ. ಜೆಡಿಎಸ್ ಕೂಡಾ ಬೆಗ್ಗರ್ ಅಲ್ಲ ಎಂದರು.
ಸೀಟು ಹಂಚಿಕೆ ವಿಚಾರದಲ್ಲಿ ಗೊಂದಲ ಇಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಲಿದೆ ಎಂದು ಹೇಳಿದರು.
ವರಿಷ್ಠರು ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಸೀಟುಗಳ ಹಂಚಿಕೆಯಲ್ಲಿ ಆಚೆ ಈಚೆ ಆಗಬಹುದು ಎಂದ ಅವರು, ಹಾಗಂತ ಗೊಂದಲ ಆಗುವುದಿಲ್ಲ. ಚರ್ಚೆ ನಡೆಸಿ ತೀರ್ಮಾನ ಕೈಗೊಳ್ತೇವೆ ಎಂದು ಹೇಳಿದರು.