Publish Date: Thu, 21 Feb 2019 (16:36 IST)
Updated Date: Thu, 21 Feb 2019 (16:38 IST)
ಸುಮಲತಾ ಅಂಬರೀಷ್ ಅವರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿರುವ ಬೆನ್ನಲ್ಲೇ ಡಿಸಿಎಂ ಹೇಳಿಕೆ ನೀಡಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ಸುಮಲತಾ ಅವರಿಗೆ ಸ್ಪರ್ಧೆ ಮಾಡುವ ಇಂಗಿತ ಇರಬಹುದು. ಆಕಾಂಕ್ಷಿಗಳು ಅವರ ಮುಖಂಡರನ್ನ ಭೇಟಿ ಮಾಡಿ ಮಾತಾಡ್ತಾರೆ. ಅವರ ಪತಿ ಅಂಬರೀಷ್ ಶಾಸಕರು, ಸಚಿವರು, ಸಂಸದರು ಆಗಿದ್ದರು. ಇದೀಗ ಸುಮಲತಾ ಅವ್ರಿಗೆ ಸ್ಪರ್ಧಿಸಬೇಕು ಅನ್ನೋ ಮನಸಿರಬಹುದು ಎಂದರು.
ಪಕ್ಷ ಹೆಲ್ಪಲೆಸ್ ಆದ್ರೆ ಮಂಡ್ಯ ಜನರ ತೀರ್ಮಾನದಂತೆ ನಡೆಯುತ್ತೇನೆ ಅನ್ನೋ ಸುಮಲತಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಸುಮಲತಾರ ವೈಯಕ್ತಿಕ ಅಭಿಪ್ರಾಯ. ಪಕ್ಷದ ತೀರ್ಮಾನದ ಬಳಿಕ ಅವರು ಯಾವ ತೀರ್ಮಾನ ಬೇಕಾದರೂ ತಗೋಬಹುದು ಎಂದು ಹೇಳಿದರು.