Publish Date: Sat, 06 May 2023 (09:25 IST)
Updated Date: Sat, 06 May 2023 (10:18 IST)
ಮಂಡ್ಯ : ಬಿಜೆಪಿ ಅಧಿಕಾರಕ್ಕೆ ಬಂದ್ರೆ 3 ಸಿಲಿಂಡರ್ ಕೊಡ್ತೀನಿ ಅಂತಾ ಹೇಳಿದೆ. ನಮ್ಮ ಸರ್ಕಾರ ಬಂದ್ರೆ 5 ಸಿಲಿಂಡರ್ ಕೊಡ್ತೀನಿ ಅಂತಾ ಹೇಳಿರುವುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದ ಕೆ.ಆರ್.ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಹೇಳಿದ ಮೇಲೆ ಬಿಜೆಪಿಯವರು ಹೇಳಿದ್ದಾರೆ. ಕೊಡುವುದಿದ್ದರೇ ಸರ್ಕಾರ ಇದ್ದಾಗಲೇ ಕೊಡಬೇಕಿತ್ತು ಎಂದು ಕುಟುಕಿದ್ದಾರೆ.
ದೇವೇಗೌಡರು ಆರೋಗ್ಯದ ಸಮಸ್ಯೆ ನಡುವೆ ನನ್ನ ಏಕಾಂಗಿ ಹೋರಾಟವನ್ನು ಅವರು ಗಮನಿಸಿದ್ದಾರೆ. ನನ್ನ ಮೇಲೆ ಬಿದ್ದಿರುವ ಒತ್ತಡವನ್ನು ಕಡಿಮೆ ಮಾಡಲು 3-4 ದಿನಗಳಿಂದ ತಾವೂ ಓಡಾಡುತ್ತಿದ್ದಾರೆ. ವೈದ್ಯರು ಅವರಿಗೆ ವಿಶ್ರಾಂತಿ ಬೇಕು ಅಂದಿದ್ದರಿಂದ ಮತ್ತಷ್ಟು ಆರೋಗ್ಯ ಹದಗೆಟ್ಟಿತ್ತು.
ಆದ್ರೆ ಮೈಸೂರಿನ ಪಂಚರತ್ನ ಸಮಾರೋಪದಲ್ಲಿ ಭಾಗಿಯಾಗಿ ಜನರನ್ನು ನೋಡಿದ ಮೇಲೆ ಅವರ ಆರೋಗ್ಯ ಸುಧಾರಿಸಿದೆ. ದೇವೇಗೌಡರು ಈ ಬಾರಿ ಪ್ರಚಾರ ಮಾಡುತ್ತಾರೆ ಅಂದುಕೊಂಡಿರಲಿಲ್ಲ. ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ದೇವೇಗೌಡರು ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.