Select Your Language

Notifications

webdunia
webdunia
webdunia
webdunia

ಬಿಜೆಪಿ ಮುಖಂಡರ ಪುತ್ರನಿಂದ ಹಲ್ಲೆ?

Attacked by BJP leader's son
hasana , ಶುಕ್ರವಾರ, 5 ಮೇ 2023 (15:33 IST)
ಚುನಾವಣಾ ಪ್ರಚಾರಕ್ಕೆ ಬಂದಾಗ ಪ್ರಶ್ನೆ ಮಾಡಿದ ಮಹಿಳೆ ಮೇಲೆ ಹಾಸನ ಬಿಜೆಪಿ ಮುಖಂಡ, ನಗರಸಭೆ ಅಧ್ಯಕ್ಷ ಮೋಹನ್ ಕುಮಾರ್ ಪುತ್ರ ಚೇತನ್ ಹಲ್ಲೆ ನಡೆಸಿದ್ದಾರೆಂದು ಆರೋಪ ಕೇಳಿ ಬಂದಿದೆ.. ಹಾಸನ ಹೊಸಕೊಪ್ಪಲು ಬಡಾವಣೆಯ ಗಾಂಧಿನಗರದಲ್ಲಿ ಚೇತನ್​​ ನಿನ್ನೆ ರಾತ್ರಿ ಬಿಜೆಪಿ ಅಭ್ಯರ್ಥಿ ಶಾಸಕ ಪ್ರೀತಂ ಗೌಡ ಪರ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ
ಗೀತಮ್ಮ ಎಂಬ ಮಹಿಳೆ ನಮ್ಮ ಮನೆ ಬಳಿ ಕಸ ಸಂಗ್ರಹ ವಾಹನ ಬರೋದಿಲ್ಲ.. ಬೀದಿ ದೀಪ ಹಾಕಿಸಿ ಎಂದು ಮನವಿ ಮಾಡಿದ್ದಾರೆ.. ನಮ್ಮ ಬೇಡಿಕೆ ಈಡೇರಿಸಿ ಆನಂತರ ಮತ ಹಾಕ್ತೇವೆ ಎಂದು ಮಹಿಳೆ ಹೇಳಿದ್ದು, ಇದಕ್ಕೆ ಚೇತನ್​​ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರಂತೆ.. ಪ್ರಶ್ನೆ ಮಾಡಿದ ಮಹಿಳೆ ಮೇಲೆ ಹಲ್ಲೆ ಮಾಡಿ, ಮನೆಯ ಗೇಟ್ ಒದ್ದು ಗಲಾಟೆ ಮಾಡಿದ್ದಾಗಿ ಆರೋಪ ಕೇಳಿ ಬಂದಿದೆ. ಮನೆ ಮುಂದೆ ಗಲಾಟೆ ಮಾಡೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.. ನಗರಸಭೆ ಅಧ್ಯಕ್ಷ ಪುತ್ರ ಚೇತನ್ ಮತ್ತು ಸುಪ್ರೀತ್​​​ ಎಂಬುವವರ ವಿರುದ್ಧ ಹಾಸನ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೂರಾರು ‘ಕೈ’ ಕಾರ್ಯಕರ್ತರು BJP ಸೇರ್ಪಡೆ