Publish Date: Fri, 05 May 2023 (15:20 IST)
Updated Date: Fri, 05 May 2023 (17:20 IST)
ಚುನಾವಣೆ ಸಮೀಪಿಸಿದ್ರೂ ಸಹ ಟಿಕೆಟ್ ವಂಚಿತ ಅಭ್ಯರ್ಥಿಗಳ ಭಿನ್ನಮತ ಶಮನವಾಗಿಲ್ಲ. ನಾಮಪತ್ರ ಹಿಂಪಡೆದ ತರುವಾಯ ಭಿನ್ನಮತ ಭಾಗಶಃ ಕಡಿಮೆಯಾಗಿತ್ತು.. ಆದರೆ ಇದೀಗ ಚಿಕ್ಕಬಳ್ಳಾಪುರ ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿದೆ..
ಕಾಂಗ್ರೆಸ್ ಕಾರ್ಯಕರ್ತರು ರಾತ್ರೋ ರಾತ್ರಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.. 150ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು BJPಗೆ ಸೇರ್ಪಡೆಗೊಂಡಿದ್ದಾರೆ.. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ಗೌಡ ವಿರುದ್ಧ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ.. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಪಡೆ ಸೇರ್ಪಡೆಯಾದ್ರು. ಹೊರಗಡೆಯಿಂದ ಬಂದವರಿಗೆ ಮಾನ್ಯತೆ ಕೊಡಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಮುನಿಸಿಕೊಂಡಿದ್ರು.