Select Your Language

Notifications

webdunia
webdunia
webdunia
webdunia

90ರ ವಯಸ್ಸಿನಲ್ಲಿ ಬಂದು ನಿಮ್ಮ ಬಳಿ ಕೈ ಚಾಚುತ್ತಿದ್ದೇನೆ, ನಿಖಿಲ್ ಗೆಲ್ಲಿಸಿ : ದೇವೇಗೌಡ

90ರ ವಯಸ್ಸಿನಲ್ಲಿ ಬಂದು ನಿಮ್ಮ ಬಳಿ ಕೈ ಚಾಚುತ್ತಿದ್ದೇನೆ, ನಿಖಿಲ್ ಗೆಲ್ಲಿಸಿ : ದೇವೇಗೌಡ
ರಾಮನಗರ , ಶನಿವಾರ, 6 ಮೇ 2023 (09:04 IST)
ರಾಮನಗರ : ಇಲ್ಲಿನ ವಿಧಾನಸಭಾ ಕ್ಷೇತ್ರದ ಸುಗ್ಗನಹಳ್ಳಿ ಗ್ರಾಮದಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ಹೆಚ್ಡಿಡಿ ಅದ್ದೂರಿ ರೋಡ್ ಶೋ ನಡೆಸಿದರು.
 
ಬಳಿಕ ಮಾತನಾಡಿದ ಹೆಚ್.ಡಿ.ದೇವೇಗೌಡ ಭಾವನಾತ್ಮಕವಾಗಿ ನಿಖಿಲ್ ಗೆಲ್ಲಿಸುವಂತೆ ಮನವಿ ಮಾಡಿದರು. ನಾನು ಎಲ್ಲಾ ಕಡೆ ಸುತ್ತಾಡಿ ಬಂದಾಗ ಈ ಗ್ರಾಮದ ಹೆಣ್ಣು ಮಗಳು ನನಗೆ ಊಟ ಹಾಕಿದ್ರು. ಈ ಮಣ್ಣಿನ ಅನ್ನದ ಖುಣ ನನ್ನ ಮೇಲಿದೆ.

ನಿಮ್ಮ ಮುಂದೆ ಕೈಚಾಚಲಿಕ್ಕೆ ಬಂದಿದ್ದೇನೆ. ನಾನು ಯಾರಿಗೋಸ್ಕರ ಬಂದಿದ್ದೇನೆ ಅಂತ ನಿಮಗೆ ಗೊತ್ತು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನ ಮೋಸ, ವಂಚನೆ ಮಾಡಿ ಸೋಲಿಸಿದರು.

ಇವತ್ತು ರಾಮನಗರದ ಜನತೆ ನಾವಿದ್ದೇವೆ ಅನ್ನೋ ವಿಶ್ವಾಸ ಕೊಟ್ಟಿದ್ದಾರೆ. ನಿಖಿಲ್ ಗೆಲ್ಲಿಸುತ್ತೇವೆ ಎಂಬ ಧೈರ್ಯ ನೀಡ್ತಿದ್ದಾರೆ. ಮುದುಕ ಬಂದು ಮತ ಕೇಳ್ತಿದ್ದಾನೆ ಅಂತ ವ್ಯಂಗ್ಯ ಮಾಡಿದರು. ಅದಕ್ಕೆ ನೀವು ಉತ್ತರ ಕೊಡಬೇಕು ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಭಯೋತ್ಪಾದನೆಗೆ ಹಣಕಾಸು ನೆರವು ನಿಲ್ಲಿಸಬೇಕು : ಜೈಶಂಕರ್